LATEST NEWS
ಉಡುಪಿ ಪಲಿಮಾರು ಮಠದ ಪರ್ಯಾಯೋತ್ಸವಕ್ಕೆ ಚಪ್ಪರ,ಭತ್ತ ಮುಹೂರ್ತ

ಉಡುಪಿ ಪಲಿಮಾರು ಮಠದ ಪರ್ಯಾಯೋತ್ಸವಕ್ಕೆ ಚಪ್ಪರ,ಭತ್ತ ಮುಹೂರ್ತ
ಉಡುಪಿ, ಡಿಸೆಂಬರ್ 08 : ಉಡುಪಿ ಶ್ರೀ ಪಲಿಮಾರು ಮಠದ ಪರ್ಯಾಯದ ಪೂರ್ವಭಾವಿಯಾಗಿ ಕೊನೆಯ ಮುಹೂರ್ತವಾದ ಭತ್ತ ಮುಹೂರ್ತ ಹಾಗೂ ಚಪ್ಪರ ಮುಹೂರ್ತ ಮಠದ ಪುರೋಹಿತರಾದ ಹೆರ್ಗ ವೇದವ್ಯಾಸ ಭಟ್ ಇವರ ನಿರ್ದೇಶನದಲ್ಲಿ ನಡೆಯಿತು.
2018 ಜನವರಿ 18 ರಂದು ಉಡುಪಿಯಲ್ಲಿ ನಡೆಯಲಿರುವ ಶ್ರೀ ಪಲಿಮಾರು ಮಠದ ಪರ್ಯಾಯೋತ್ಸವಕ್ಕೆ ರಾಜಾಂಗಣದ ಸಮೀಪ

ಚಪ್ಪರ ಹಾಗೂ ಭತ್ತ ಮುಹೂರ್ತವು ನಡೆಯಿತು. ಈ ಸಂದರ್ಭದಲ್ಲಿ ಮಠದ ದಿವಾನರಾದ ವೇದವ್ಯಾಸ ತಂತ್ರಿಗಳು,ಮಠದ
ಪುರೋಹಿತರಾದ ಹೆರ್ಗ ವೇದವ್ಯಾಸ ಭಟ್, ಪರ್ಯಾಯ ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ,ಅದಮಾರು ಮಠದ
ದಿವಾನರಾದ ವೆಂಕಟರಮಣ ಮುಚ್ಚಿನ್ತಯಾ, ಕಟೀಲು ದೇವಸ್ಥಾನದ ಅರ್ಚಕರಾದ ಹರಿನಾರಾಯಣ ಅಸ್ರಣ್ಣ,ಕಮಲಾದೇವಿ ಅಸ್ರಣ್ಣ ,ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಬಾಲಾಜಿ ರಾಘವೇಂದ್ರ ಆಚಾರ್ಯ, ಮುಚ್ಚಿನ್ತಯಾ,ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮಟ್ಟು
ಲಕ್ಷ್ಮೀನಾರಾಯಣ ರಾವ್, ಪದ್ಮನಾಭ ಭಟ್, ಖಜಾಂಚಿ ರಮೇಶ್ ರಾವ್ ಬೀಡು ಹಾಗೂ ಜೊತೆ ಕಾರ್ಯದರ್ಶಿಗಳಾದ ವಿಷ್ಣುಪ್ರಸಾದ್ ಪಾಡಿಗಾರ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು