ಉಡುಪಿ ನವೆಂಬರ್ 21: ಆನ್ಲೈನ್ ಟಾಸ್ಕ್ ಗಳನ್ನು ನಂಬಿ ಯುವಕನೊಬ್ಬ ಬರೋಬ್ಬರಿ 12 ಲಕ್ಷ ಹಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.


ದಿನಾಂಕ 22/10/2025 ರಂದು ತನ್ನ ಮೊಬೈಲ್‌ನಲ್ಲಿ ಟೆಲಿಗ್ರಾಂ ಆಪ್‌ ನ್ನು ವೀಕ್ಷಿಸುತ್ತಿದ್ದಾಗ Roshnikhandbara ಎಂಬ ಹೆಸರಿನಲ್ಲಿ @Roshnikhandbara ಎಂಬ ಜಾಬ್ ಲಿಂಕ್ ಬಂದಿದ್ದು ಲಿಂಕ್ ನಲ್ಲಿ ಬೇರೆ ಬೇರೆ ಉದ್ಯೋಗದ ಬಗ್ಗೆ ಹಾಗೂ ಇನ್ವೆಸ್ಟ್ಮೆಂಟ್ ಬಗ್ಗೆ ಮೆಸೆಜ್ ಬಂದಿದ್ದು, ಅದನ್ನು ಲಿಂಕ್ ನ್ನು ಕ್ಲಿಕ್ ಮಾಡಿದ್ದಾರೆ, ಬಳಿಕ NSE (Nation Stock Exchange) ಎಂಬ ಗ್ರೂಪಿಗೆ ಸೇರಿದ್ದಾರೆ.

Read This – ಟ್ರಾಫಿಕ್ ಫೈನ್ ಗಳಿಗೆ ಮತ್ತೆ 50 ಪರ್ಸೆಂಟ್ ಡಿಸ್ಕೌಂಟ್ ಆಫರ್

ನಂತರ Vishal Kumar ಎಂಬಾತನು ಪಿರ್ಯಾದಿದಾರರನ್ನು ಹೋಟೆಲ್ ರೇಟಿಂಗ್ಸ್ ಮತ್ತು ಪ್ರಾಫಿಟ್ ಆನ್ ಇನ್ವೆಸ್ಟ್ಮೆಂಟ್ ಬಗ್ಗೆ ಬೇರೆ ಗ್ರೂಪ್ ಸೇರಿಸಿರುತ್ತಾನೆ. ಮೊದಲಿಗೆ 3 ಟಾಸ್ಕ್‌ ನೀಡಿದ್ದು ಮುಗಿದ ಬಳಿಕ ಪಿರ್ಯಾದಿದಾರರು ಆರೋಪಿತರು ನೀಡಿದ QR Code ಗೆ ರೂಪಾಯಿ 3,900/- ನ್ನು ಇನ್ವೆಸ್ಟ್ಮೆಂಟ್ ಬಗ್ಗೆ ಜಮಾ ಮಾಡಿರುತ್ತಾರೆ. ಈ ಬಗ್ಗೆ ಆರೋಪಿತರು ರೂಪಾಯಿ 8,800/- ಮೊತ್ತವನ್ನು ಪಿರ್ಯಾದಿದಾರರು ನೀಡಿದ ಬ್ಯಾಂಕ್ ಖಾತೆಗೆ ಜಮಾ ಮಾಡಿರುತ್ತಾರೆ. ನಂತರ ಪಿರ್ಯಾದಿದಾರರು ದಿನಾಂಕ 22/10/2025 ರಿಂದ ದಿನಾಂಕ 29/10/2025ರ ವರೆಗೆ ಆರೋಪಿತರು ತಿಳಿಸಿದಂತೆ ಹಂತ ಹಂತವಾಗಿ ಒಟ್ಟು 12,38,750/- ಹಣವನ್ನು ಆರೋಪಿತರು ನೀಡಿದ QR Code ಗೆ ಸ್ಕಾನ್‌ ಮಾಡಿ, RTGS ಹಾಗೂ ಕ್ಯಾಶ್‌ ಡೆಪೋಸಿಟ್‌ ಮುಖಾಂತರ ಹೂಡಿಕೆ ಮಾಡಿದ್ದು, ಆರೋಪಿಗಳು ಪಿರ್ಯಾದಿದಾರರು ಈ ವರೆಗೆ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ನೀಡದೇ ನಂಬಿಸಿ ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2025 ಕಲಂ: 66(ಸಿ), 66(ಡಿ) ಐ.ಟಿ. ಆಕ್ಟ್ & ಕಲಂ: 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Share Information