ಉಡುಪಿಯಲ್ಲಿ ದಿಢೀರ್ ವರ್ಗಾವಣೆ.. ಜಿಲ್ಲೆ ಎಸ್ಪಿ ಆಗಲು ಬಂದವರು ಈಗ ನಕ್ಸಲ್ ನಿಗ್ರಹಕ್ಕೆ..!

ಉಡುಪಿ ಜ.2: ವರ್ಗಾವಣೆಯಾಗಿ ಅಧಿಕಾರ ಸ್ವೀಕಾರಕ್ಕೆ ಬಂದ ಸಂದರ್ಭ ಮತ್ತೆ ವರ್ಗಾವಣೆ ಆದೇಶ ಬಂದ ಘಟನೆ ನಿನ್ನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಎಸ್ಪಿಯಾಗಿ ಆಯ್ಕೆಯಾದ ಅಕ್ಷಯ್ ಮಚ್ಚೀಂದ್ರ ನಿನ್ನೆ ಅಧಿಕಾರ ಸ್ವೀಕಾರಕ್ಕೆ ಬಂದ ಸಂದರ್ಭದಲ್ಲಿಯೇ ಮತ್ತೆ ವರ್ಗಾವಣೆ ಭಾಗ್ಯ ದೊರಕಿದೆ.

ಉಡುಪಿ ಎಸ್ಪಿಯಾಗಿದ್ದ ನಿಶಾ ಜೇಮ್ಸ್ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಳಿಸಲಾಗಿದೆ. ಅವರ ಜಾಗಕ್ಕೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ಅಕ್ಷಯ್ ಮಚ್ಚೀಂದ್ರ ಅವರನ್ನು ವರ್ಗಾಯಿಸಲಾಗಿತ್ತು.

ಈ ಹಿನ್ನಲೆ ನಿನ್ನ ಅಧಿಕಾರ ಸ್ವೀಕಾರಕ್ಕೆ ಎಸ್ಪಿ ಕಚೇರಿಗೆ ಆಗಮಿಸಿದ ಸಂದರ್ಭ ಮತ್ತೆ ನೇಮಕದ ಆದೇಶದಲ್ಲಿ ಮತ್ತೇ ಬದಲಾವಣೆಯಾಗಿದೆ. ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ ಅಕ್ಷಯ್ ಮಚ್ಚೀಂದ್ರ ಅವರನ್ನು ಕೈಬಿಟ್ಟು ಬೆಂಗಳೂರು ನಗರ ಡಿಸಿಪಿಯಾಗಿದ್ದ ಎನ್.ವಿಷ್ಣುವರ್ಧನ್ ಅವರನ್ನು ನೂತನ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ನೇಮಕ ಮಾಡಿದೆ.

ಇದೀಗ ಅಕ್ಷಯ್ ಮಚ್ಚೀಂದ್ರ ಅವರನ್ನು ಸರಕಾರ ಕಾರ್ಕಳ ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಳಿಸಿದೆ.ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ಪಿ ನಿಶಾ ಜೇಮ್ಸ್ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಳಿಸಲಾಗಿದೆ.

ವಿಷ್ಣುವರ್ಧನ್‌ 2015ರ ಬ್ಯಾಚ್‌ ನ ಐಪಿಎಸ್ ಅಧಿಕಾರಿಯಾಗಿದ್ದು ಮೂರು ವರ್ಷಗಳ ಹಿಂದೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ, ಮಂಗಳೂರು ಡಿಸಿಪಿಯಾಗಿ ಹಾಗೂ ಮೈಸೂರು ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.