ಉಡುಪಿ ಕಡಲತಡಿಯಲ್ಲಿ ಮರಳು ಶಿಲ್ಪದ ಮೂಲಕ ಮೋದಿಗೆ ಶುಭಾಶಯ

ಉಡುಪಿ ಮೇ 30: ದೇಶದ ಪ್ರಧಾನಿಯಾಗಿ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿರುವ ನರೇಂದ್ರ ಮೋದಿ ಅವರಿಗೆ ದೇಶದಾದ್ಯಂತ ಶುಭ ಹಾರೈಕೆಗಳು ಬರುತ್ತಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ಮರಳು ಶಿಲ್ಪ ಕಲಾವಿದ ಹರೀಶ್ ಸಾಗಾ ಮೋದಿ ಪ್ರಮಾಣ ವಚನ ಮತ್ತು ಸಂಪುಟ ರಚನೆಗೆ ಮರಳು ಶಿಲ್ಪದ ಮೂಲಕ ಶುಭ ಹಾರೈಸಿದ್ದಾರೆ.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸ್ಲೋಗನ್ ಅಡಿಯಲ್ಲಿ ರಚಿಸಿದ ಮರಳು ಶಿಲ್ಪ ಮಲ್ಪೆ ಕಡಲ ತೀರದ ಪ್ರವಾಸಿಗರನ್ನು ಆಕರ್ಷಿಸಿತು. ಅನೇಕ ಪ್ರವಾಸಿಗರು , ಮೋದಿ ಅಭಿಮಾನಿಗಳು ಮರಳು ಶಿಲ್ಪದ ಎದುರು ನಿಂತು ಸೆಲ್ಫಿ‌ ಕ್ಲಿಕ್ಕಿಸಿಕೊಂಡರು.

Facebook Comments

comments