Connect with us

  DAKSHINA KANNADA

  ಲೋಕಸಭೆ ಚುನಾವಣೆ ಉಡುಪಿ ಚಿಕ್ಕಮಗಳೂರು ಕೋಟ ಶ್ರೀನಿವಾಸ ಪೂಜಾರಿ – ದಕ್ಷಿಣಕನ್ನಡ ಜಿಲ್ಲೆಗೆ ಕ್ಯಾ.ಬ್ರಿಜೇಶ್ ಚೌಟ ಗೆ ಟಿಕೆಟ್

  ಮಂಗಳೂರು ಮಾರ್ಚ್ 13: ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಕರ್ನಾಟಕದ 20 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪೈನಲ್ ಮಾಡಿದೆ.


  ಅದರಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿಗೆ ಅಭ್ಯರ್ಥಿಯಾಗಿದ್ದು, ದಕ್ಷಿಣಕನ್ನಡ ಜಿಲ್ಲೆಯಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭ್ಯರ್ಥಿಯಾಗಿದ್ದಾರೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರಕ್ಕೆ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ವಿಧಾನಪರಿಷತ್ ನಲ್ಲಿ ವಿಪಕ್ಷ ನಾಯಕನಾಗಿರುವ  ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಇದೀಗ ಬಿಜೆಪಿ ಲೋಕಸಭೆ ಟಿಕೇಟ್ ನೀಡಿದೆ.  ದಕ್ಷಿಣಕನ್ನಡ ಜಿಲ್ಲೆಯ ಹಾಲಿ ಸಂಸದ ನಳಿನ್ ಕುಮಾರ್ ಗೆ ಟಿಕೆಟ್  ನಿರಾಕರಿಸಲಾಗಿದ್ದು, ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ನೀಡಲಾಗಿದೆ.

  ಕೊನೆಗೂ ಪ್ರತಾಪ್ ಸಿಂಹ ಅವರಿಗೆ ಮೈಸೂರು ಕೊಡಗು ಕ್ಷೇತ್ರದಿಂದ ಟಿಕೆಟ್ ನಿರಾಕರಿಸಲಾಗಿದ್ದು, ಮೈಸೂರಿನ ಮಹಾರಾಜ ಯದುವೀರ್ ಓಡೆಯರ್ ಅವರಿಗೆ ಟಿಕೆಟ್ ನೀಡಿದೆ.

  ಬಿಜೆಪಿ ಇಲ್ಲಿವರೆಗೆ ಒಟ್ಟು 267 ಕ್ಷೇತ್ರಗಳಿಗೆ ಟಿಕೆಟ್ ನೀಡಿದಂತಾಗಿದೆ. ಇನ್ನೂ 276 ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿಯಿದೆ.

  ಕರ್ನಾಟಕದಲ್ಲಿ 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ.

  ಕರ್ನಾಟಕದಲ್ಲಿ ಟಿಕೆಟ್ ಪಡೆದವರು

  ಚಿಕ್ಕೋಡಿ: ಅಣ್ನಾ ಸಾಹೇಬ್ ಶಂಕರ್ ಜೊಲ್ಲೆ

  ಬಾಗಲಕೋಟೆ: ಪಿ.ಸಿ ಗದ್ದಿಗೌಡರ

  ಬಿಜಾಪುರ: ರಮೇಶ ಜಿಗಜಿಣಗಿ

  ಗುಲ್ಬರ್ಗ: ಡಾ. ಉಮೇಶ್ ಜಾಧವ್‌

  ಬೀದರ್: ಭಗವಂತ ಖೂಬಾ

  ಕೊಪ್ಪಳ: ಬಸವರಾಜ ಕ್ಯಾವತ್ತೂರ

  ಬಳ್ಳಾರಿ: ಶ್ರೀರಾಮುಲು

  ಹಾವೇರಿ: ಬಸವರಾಜ ಬೊಮ್ಮಾಯಿ

  ಧಾರವಾಡ: ಪ್ರಲ್ಹಾದ ಜೋಶಿ

  ದಾವಣಗೆರೆ: ಗಾಯತ್ರಿ ಸಿದ್ದೇಶ್ವರ

  ಶಿವಮೊಗ್ಗ: ಬಿ.ವೈ ರಾಘವೇಂದ್ರ

  ಉಡುಪಿ–ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ

  ದಕ್ಷಿಣ ಕನ್ನಡ: ಕ್ಯಾ. ಬ್ರಿಜೇಶ್ ಚೌಟ

  ತುಮಕೂರು: ವಿ. ಸೋಮಣ್ಣ

  ಮೈಸೂರು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

  ಚಾಮರಾಜನಗರ: ಎಸ್‌. ಬಾಲರಾಜ್‌

  ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್ ಮಂಜುನಾಥ್‌

  ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ

  ಬೆಂಗಳೂರು ಕೇಂದ್ರ: ಪಿ.ಸಿ ಮೋಹನ್‌

  ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ

   

   

  Share Information
  Advertisement
  Click to comment

  You must be logged in to post a comment Login

  Leave a Reply