Connect with us

    LATEST NEWS

    ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಗೆ ಹಲವೆಡೆ ನೆರೆ ಸೃಷ್ಟಿ

    ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಗೆ ಹಲವೆಡೆ ನೆರೆ ಸೃಷ್ಟಿಯಾಗಿದ್ದು, ಮಲ್ಪೆ- ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ವ್ಯತ್ಯಯಗೊಂಡಿದೆ.

    ಹಿರಿಯಡ್ಕ ಸಮೀಪದ ಪುತ್ತಿಗೆ ಸೇತುವೆ ಪರಿಸರ ಮುಳುಗಡೆಯಾಗಿದೆ. ತುಂಬಿ ಹರಿಯುತ್ತಿದೆ ಸ್ವರ್ಣಾ ನದಿ ನೀರು ಕೃತಕ ನೆರೆ ಸೃಷ್ಟಿಮಾಡಿದ್ದು, ಮಾಣೈ ಪರಿಸರದಲ್ಲೂ ನೀರಿನ ಸೆಳೆತಕ್ಕೆ ಸುಮಾರು ಇಪ್ಪತ್ತು ಮನೆಗಳು ಮುಳುಗಡೆಯಾಗಿದೆ.

    ಸ್ಥಳೀಯ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಭಾರಿ ಮಳೆಗೆ ಉಡುಪಿ- ಆಗುಂಬೆ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ

    ಪುತ್ತಿಗೆ ವಿದ್ಯಾಪೀಠಕ್ಕ ನುಗ್ಗಿದ ನೀರು, ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲಮಠದ ಗೋಶಾಲೆ ಸಂಪೂರ್ಣ ಜಲಾವೃತಗೊಂಡಿದೆ, ಸ್ಥಳೀಯರ ನೆರವಿನೊಂದಿಗೆ ಗೋವುಗಳನ್ನೂ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಮಾಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply