ಪಡುಬಿದ್ರೆ ಡಿಸೆಂಬರ್ 30: ಚಾಲಕನ ನಿಯಂತ್ರಣ ಚಪ್ಪಿ ಗೂಡ್ಸ್ ಟೆಂಪೋ ಒಂದು ರಸ್ತೆ ಬದಿಯಲ್ಲಿದ್ದ ಮನೆಗೆ ಡಿಕ್ಕಿ ಹೊಡೆದ ಘಟನೆ ರಾಹೆ 66ರ ಹೆಜಮಾಡಿ ಕನ್ನಂಗಾರ್ ಗರೊಡಿ ಬಳಿ ಸಂಭವಿಸಿದೆ.

ಪಡುಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಸಂಚಾರಿಸುತ್ತಿದ್ದ ವಿಶ್ವ ಟ್ರಾನ್ಸ್ಪೋರ್ಟ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಂಜತೋಟ ಇಸ್ಮಾಯಿಲ್ ಎಂಬವರ ಮನೆಗೆ ಢಿಕ್ಕಿ ಹೊಡೆದಿದೆ. ಮನೆಯ ಮಂದಿ ಕೊಣೆಯಲ್ಲಿದ್ದ ಕಾರಣ ಪವಾಡ ಸದೃಶ್ಯದಿಂದ ಪಾರಾಗಿದ್ದಾರೆ. ಮನೆಗೆ ಭಾಗಶಃ ಹಾನಿಯಾಗಿದೆ.



