Connect with us

LATEST NEWS

ಉಡುಪಿ ಡಿಸಿಐಬಿ ಪೊಲೀಸರ ಕಾರ್ಯಾಚರಣೆ 1 ಕೆಜಿ ಗಾಂಜಾ ವಶ ಇಬ್ಬರ ಬಂಧನ

ಉಡುಪಿ, ಅಗಸ್ಟ್ 17: ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಪಾನಕದಕಟ್ಟೆ ಎಂಬಲ್ಲಿರುವ ಈಟ್‌ ರಿಪೀಟ್ ಎಂಬ ಕಬಾಬ್ ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟಕ್ಕೆ ಇಟ್ಟಿದ್ದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


ಬಂಧಿತರನ್ನು ಕಾವ್ರಾಡಿ ಗ್ರಾಮದ ಮಹ್ಮದ್ ತನ್ವೀರ್ (36) ಹಾಗೂ ಕಾವ್ರಾಡಿಯ ಜನತಾ ಕಾಲೋನಿಯ ಸಬೀಬ್ (25) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಮಹ್ಮದ್ ತನ್ವೀರ್ ಹಾಗೂ ಸಬೀಬ್ ಅಂಗಡಿಯಲ್ಲಿ 1 ಕೆ.ಜಿ. 50 ಗ್ರಾಂ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು ಇರಿಸಿಕೊಂಡಿದ್ದು ಕಾರ್ಯಾಚರಣೆ ನಡೆಸಿದ ಪೊಲೀಸರು 1 ಕೆ.ಜಿ. 50 ಗ್ರಾಂ ಗಾಂಜಾ ಮತ್ತು 2 ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಒಟ್ಟು ಸೊತ್ತುಗಳ ಮೌಲ್ಯ ಸುಮಾರು 25,000/- ರೂಪಾಯಿ ಎಂದು ಅಂದಾಜಿಸಲಾಗಿದೆ.

Facebook Comments

comments