Connect with us

    LATEST NEWS

    ಉಡುಪಿ – ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಮನೆ

    ಉಡುಪಿ ಫೆಬ್ರವರಿ 2: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮನೆ ಹೊತ್ತಿ ಉರಿದ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯ ಮಟ್ಟು ದುಗ್ಗುಪಾಡಿಯಲ್ಲಿ ಎಂಬಲ್ಲಿ ನಡೆದಿದೆ.

    ಇಲ್ಲಿನ ವನಜ ಎನ್‌.ಕೆ ಎಂಬವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಮನೆ ಹಾಗೂ ದನದ ಹಟ್ಟಿಗೆ ಹೊತ್ತಿ ಉರಿದಿದೆ. ಮನೆ ರಿಪೇರಿ ಮತ್ತು ದೈವದ ಮನೆ ಕಟ್ಟಲು ತಂದು ಇರಿಸಲಾಗಿದ್ದ ಮರದ ದಾರಂದಗಳು, ಕಿಟಕಿಗಳು, ಬೈಹುಲ್ಲು ಹಾಗೂ ವಿದ್ಯುತ್‌ ಸಂಪರ್ಕ, ಸಲಕರಣೆಗಳೂ ಅಗ್ನಿಗೆ ಆಹುತಿಯಾಗಿದೆ. ಸ್ಥಳೀಯರು ಮತ್ತು ಜಿಲ್ಲಾ ಅಗ್ನಿಶಾಮಕ ದಳವು ಬೆಂಕಿಯನ್ನು ನಂದಿಸಿ ಹೆಚ್ಚಿನ ಅವಘಡವು ತಪ್ಪಿಸಿದ್ದಾರೆ. ಅಗ್ನಿ ಅವಘಡದಿಂದ ಸುಮಾರು 3 ಲಕ್ಷ ರೂ. ಗೂ ಅಧಿಕ ಹಾನಿ ಸಂಭವಿಸಿದೆ ಎನ್ನಲಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply