Connect with us

    LATEST NEWS

    ಕಾಮನ್‍ವೆಲ್ತ್ ಗೇಮ್ ಪದಕ ವಿಜೇತ ಗುರುರಾಜ್ ಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನ

    ಕಾಮನ್‍ವೆಲ್ತ್ ಗೇಮ್ ಪದಕ ವಿಜೇತ ಗುರುರಾಜ್ ಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನ

    ಉಡುಪಿ, ಏಪ್ರಿಲ್ 19 : ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‍ವೆಲ್ತ್ ಗೇಮ್‍ನಲ್ಲಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ ಜಿಲ್ಲೆಯ ಗುರುರಾಜ್ ಅವರನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ಸನ್ಮಾನಿಸಲಾಯಿತು.

    ಗುರುರಾಜ್ ಅವರ ಸಾಧನೆ ಇಡೀ ಜಿಲ್ಲೆಗೆ ಹೆಮ್ಮೆ ತರುವ ವಿಷಯ, ಇವರ ಸಾಧನೆ ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿ, ಇವರ ಸಾಧನೆಗೆ ಬೆಂಬಲ ನೀಡಿದ ಇವರ ಕುಟುಂಬ ಸದಸ್ಯರೂ ಸಹ ಅಭಿನಂದನೀಯರು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಗುರುರಾಜ್ ಅವರ ಸಾಧನೆ ರಾಜ್ಯದ ಎಲ್ಲಾ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಲಿ, ಅವರ ಕ್ರೀಡಾ ಜೀವನದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ದೊರೆಯಲಿ ಎಂದು ಹೇಳಿದರು.

    ಜಿಲ್ಲಾಡಳಿತದ ಸನ್ಮಾನ ಸ್ವೀಕರಿಸಿ ಮಾತನಾಡಿದ ಗುರುರಾಜ್ ಅವರು, ದೇಶಕ್ಕೆ ಬೆಳ್ಳಿ ತಂದುಕೊಟ್ಟದ್ದು ಅತ್ಯಂತ ಸಂತಸದ ವಿಷಯ, ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ನೀಡಿದ ಸ್ವಾಗತ ತುಂಬಾ ಚೆನ್ನಾಗಿ ಇತ್ತು, ಇದೇ ರೀತಿಯ ಪ್ರೋತ್ಸಾಹ ಎಲ್ಲಾ ಕ್ರೀಡಾಪಟುಗಳಿಗೆ ಸಿಗಲಿ, ಇದರಿಂದ ಇನ್ನಷ್ಟು ಪ್ರತಿಭೆಗಳು ಮೇಲೆ ಬರಲು ಸಾಧ್ಯವಾಗಲಿದೆ, ಕ್ರೀಡಾಪಟುಗಳು ಕಠಿಣ ಪರಿಶ್ರಮ ಪಟ್ಟರೆ ಯಶಸ್ಸು ಸಿಗುತ್ತದೆ, ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದು ಹೇಳಿದರು.

    ಮುಂದೆ ನಡೆಯುವ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ, ಒಲಂಪಿಕ್ಸ್ ನಲ್ಲಿ ದೇಶಕ್ಕಾಗಿ ಪದಕ ಗಳಿಸುವ ಗುರಿ ಇದೆ ಇದಕ್ಕಾಗಿ ಹೆಚ್ಚಿನ ಪರಿಶ್ರಮ ಪಡುವುದಾಗಿ ಗುರುರಾಜ್ ಹೇಳಿದರು. ಅಪರ ಜಿಲ್ಲಾಧಿಕಾರಿ ಅನುರಾಧ ಹಾಗೂ ಎಲ್ಲಾ ಅಧಿಕಾರಿಗಳು ಜಿಲ್ಲಾಡಳಿತದ ವತಿಯಿಂದ ಗುರುರಾಜ್ ಅವರನ್ನು ಸನ್ಮಾನಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply