ಖುದ್ದು ಜಿಲ್ಲಾಧಿಕಾರಿಯಿಂದಲೇ ಮತದಾರರ ಮನೆ ಬಾಗಿಲಿಗೆ ತೆರಳಿ ವೋಟರ್ ಸ್ಲಿಪ್ ವಿತರಣೆ

ಉಡುಪಿ, ಏಪ್ರಿಲ್ 2 : ಜಿಲ್ಲೆಯಲ್ಲಿ ಏಪ್ರಿಲ್ 18 ರಂದು ನಡೆಯುವ ಲೋಕಸಭಾ ಚುನಾವಣೆ ಅಂಗವಾಗಿ, ಉಡುಪಿಯ ಮಿಷನ್ ಕಾಂಪೌಂಡ್ ಮತ್ತು ಅಮ್ಮಣ್ಣಿ ರಾಮಣ್ಣ ಹಾಲ್ ಬಳಿಯ ಮತದಾರರರಿಗೆ , ಮತದಾರರ ಭಾವಚಿತ್ರವಿರುವ ವೋಟರ್ ಸ್ಲಿಪ್ ಗಳನ್ನು , ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಮನೆ ಬಾಗಿಲಿಗೆ ತೆರಳಿ ಮಂಗಳವಾರ ವಿತರಿಸಿದರು.

ಮತದಾರರಿಗೆ ವೋಟರ್ ಸ್ಲಿಪ್ ವಿತರಿಸಿದ ಜಿಲ್ಲಾಧಿಕಾರಿ, ಮತದಾರರಿಗೆ ಮತದಾನ ದಿನಾಂಕವನ್ನು ತಿಳಿಸಿ, ತಪ್ಪದೇ ಮತದಾನ ಮಾಡುವಂತೆ ತಿಳಿಸಿ, ಮತಕೇಂದ್ರದಲ್ಲಿ ಮತದಾರರಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ, ಎಪಿಕ್ ಕಾರ್ಡ್ ಇಲ್ಲದ ಮತದಾರರು , ವೋಟರ್ ಸ್ಲಿಪ್ ಜೊತೆಯಲ್ಲಿ ಚುನಾವಣಾ ಆಯೋಗ ಸೂಚಿಸಿರುವ 11 ರೀತಿಯ ಗುರುತಿನ ಚೀಟಿಯಲ್ಲಿ ಯಾವುದಾದರೊಂದು ಚೀಟಿಯನ್ನು ತಪ್ಪದೇ ತೆಗೆದುಕೊಂಡು ಹೋಗಿ ಮತದಾನ ಮಾಡುವಂತೆ ತಿಳಿಸಿದರು.

ಮತದಾರರಿಗೆ ವಿವಿ ಪ್ಯಾಟ್ ಕುರಿತು ಮಾಹಿತಿಯನ್ನು ನೀಡಿದ ಜಿಲ್ಲಾಧಿಕಾರಿ, ಕುಟುಂಬದಲ್ಲಿ ಮತದಾನ ಅರ್ಹತೆ ಹೊಂದಿರುವ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಹೇಳಿದರು.

ಯಾವುದೇ ಅಭ್ಯರ್ಥಿ ಕೇಳಿದರೂ ತಮ್ಮ ಮತದಾನದ ಗುಟ್ಟನ್ನು ಹೇಳದಂತೆ ತಿಳಿಸಿದ ಜಿಲ್ಲಾಧಿಕಾರಿ, ಯಾವುದೇ ವ್ಯಕ್ತಿ ಆಮಿಷ, ಉಡುಗೊರೆಗಳನ್ನು ನೀಡಿ ಪ್ರಭಾವ ಬೀರಲು ಯತ್ನಿಸಿದಲ್ಲಿ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿದರು.

ಅಮ್ಮಣ್ಣಿ ರಾಮಣ್ಣ ಹಾಲ್ ಬಳಿಯ ಮನೆಯಲ್ಲಿದ 97 ವರ್ಷದ ವೃದ್ದೆಗೆ ಮನೆಯೊಳಗೆ ತೆರಳಿ ವೋಟರ್ ಸ್ಲಿಪ್ ವಿತರಿಸಿದ ಜಿಲ್ಲಾಧಿಕಾರಿ, ಅಲ್ಲಿಯೇ ಇದ್ದ ಬಿ.ಎಲ್‍ಓ ಗೆ , ವೃದ್ದರ ಹೆಸರನ್ನು ಗುರುತು ಮಾಡಿಕೊಂಡು, ಮತದಾನದ ದಿನ ಅವರನ್ನು ಮತಗಟ್ಟೆಗೆ ಕರೆದೊಯ್ಯಲು ವಾಹನ ವ್ಯವಸ್ಥೆ ಹಾಗೂ ಮತದಾನ ಮಾಡಲು ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಿದರು.

ಪ್ರತಿ ಮನೆಗಳಲ್ಲಿನ ಮತದಾರರ ವೋಟರ್ ಸ್ಲಿಪ್ ಗಳನ್ನು ಪರಿಶೀಲಿಸಿ ವಿತರಿಸಿದ ಜಿಲ್ಲಾಧಿಕಾರಿಗಳು, ಬಿ.ಎಲ್ ಓ ಗಳು ಆದಷ್ಟು ಶೀಘ್ರದಲ್ಲಿ ಎಲ್ಲಾ ಮತದಾರರಿಗೆ ಸಂಪೂರ್ಣವಾಗಿ ವೋಟರ್ ಸ್ಲಿಪ್ ವಿತರಣೆ ಕಾರ್ಯ ಮುಗಿಸುವಂತೆ ಹಾಗೂ ಯಾವುದೂ ಮತದಾರರು ವೊಟರ್ ಸ್ಲಿಪ್ ನಿಂದ ವಂಚಿತರಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

8 Shares

Facebook Comments

comments