Connect with us

LATEST NEWS

ಉಡುಪಿ ಇಬ್ಬರು ಖಾಸಗಿ ಬಸ್ ಚಾಲಕರು ಸೇರಿ 9 ಮಂದಿಗೆ ಕೊರೊನಾ

ಉಡುಪಿ ಜೂನ್ 30: ಉಡುಪಿ ಜಿಲ್ಲೆಯಲ್ಲಿಂದು 9 ‌ಮಂದಿಗೆ ಕೊರೋನಾ‌ ಸೋಂಕು ದೃಢಪಟ್ಟಿದೆ. ಇದರೊಂದಿಗ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 1206ಕ್ಕೆ ಏರಿಕೆಯಾಗಿದೆ. ಇಂದು ದೃಢಪಟ್ಟ ಪ್ರಕರಣಗಳಲ್ಲಿ 6 ಗಂಡು‌ ಹಾಗೂ 4 ಮಹಿಳೆಯರಿಗೆ ಸೊಂಕು ತಗುಲಿದ್ದು, ಸೊಂಕಿತರು 3 ಮಂದಿ ಮುಂಬೈ‌ನಿಂದ ಓರ್ವ ಹೈದರಾಬಾದ್ ನಿಂದ‌ ಆಗಮಿಸಿದ್ದಾರೆ.

ಇನ್ನಿಬ್ಬರು ಪಾಸಿಟಿವ್ ವ್ಯಕ್ತಿಯ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರು. ಕುಂದಾಪುರದಿಂದ ಬೆಂಗಳೂರಿಗೆ ತೆರಳುವ ಇಬ್ಬರು ಬಸ್ಸು ಚಾಲಕರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಉಡುಪಿ ಜಿಲ್ಲೆಯ ಓರ್ವ ಬಟ್ಟೆ ಮಳಿಗೆ ಮಾಲಕನಿಗೆ ಕೋವಿಡ್19 ಪತ್ತೆಯಾಗಿದೆ. ಬೆಂಗಳೂರು ಪ್ರಯಾಣ ಮಾಡಿರುವ ಹಿನ್ನಲೆಯಲ್ಲಿ ಬಟ್ಟೆ ‌ಮಳಿಗೆ ಮಾಲಕನ ಮಗನ ಸ್ವ್ತಾಬ್‌ ಪರೀಕ್ಷೆ ಮಾಡಲಾಗಿದೆ. ಇನ್ನು ಉಡುಪಿಯಲ್ಲಿ 11 ಮಂದಿ ಇಂದು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Facebook Comments

comments