ಕಾಸರಗೋಡು ಮೇ 04: ಕೇರಳದ ಪೋಟೋ ಫೀನಿಶ್ ಕ್ಷೇತ್ರ ಎಂದೇ ಖ್ಯಾತಿ ಪಡೆದಿದ್ದ, ಕೇರಳದ ವಿಧಾನಸಭೆ ಚುನಾವಣೆಯಲ್ಲಿ ಅತೀ ಕುತೂಹಲ ಮೂಡಿಸಿರುವ ಕ್ಷೇತ್ರಗಳಾದ ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ ಗೆಲವುವನ್ನು ಸಾಧಿಸಿದ್ದಾರೆ.

ಪ್ರತೀ ಬಾರಿಯೂ ಪೋಟೋಫೀನಿಶ್ ಕ್ಷೇತ್ರ ಎಂದು ಖ್ಯಾತಿ ಪಡೆದಿದ್ದ ಮಂಜೇಶ್ವರದಲ್ಲಿ ಈ ಬಾರಿ ಆಶ್ರಫ್ ಬರೋಬ್ಬರಿ 29 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲವನ್ನು ಸಾಧಿಸಿದ್ದಾರೆ. 17 ನೇ ಸುತ್ತಿನ ಮತ ಏಣಿಕೆ ಮುಕ್ತಾಯಗೊಂಡ ವೇಳೆ ಅಶ್ರಫ್ 96, 948 ಮತ ಗಳನ್ನು ಪಡೆದಿದ್ದರು. ಬಿಜೆಪಿಯ ಸುರೇಂದ್ರನ್ 67,696 ಮತಗಳನ್ನು ಪಡೆಯಲು ಸಾಧ್ಯವಾಗಿದೆ. ಅಶ್ರಫ್ 29,252 ಮತಗಳ ಅಂತರದಲ್ಲಿ ಗೆಲವನ್ನು ಸಾಧಿಸಿದ್ದಾರೆ. ಕೇರಳದಲ್ಲಿ ಬಿಜೆಪಿ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಕ್ಷೇತ್ರಗಳಲ್ಲಿ ಒಂದಾಂದ ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿಯವರಿಗೆ ಗೆಲವು ದಾಖಲಿಸಲು ಸಾಧ್ಯವಾಗಿಲ್ಲ. ಪೋಟೋ ಫೀನಿಶ್ ಕ್ಷೇತ್ರ ಎಂದೇ ಖ್ಯಾತಿ ಪಡೆದಿದ್ದ ಮಂಜೇಶ್ವರದಲ್ಲಿ ಯುಡಿಎಫ್ ಭರ್ಜರಿ ಗೆಲವು ಪಡೆದಿದೆ.