ಎಲ್ಲಾ ಓಪನ್ ಮಾಡಿ ಓಡಾಡಬೇಡಿ ಅಂದ್ರೆ ಹೇಗೆ – ಯು.ಟಿ ಖಾದರ್ ಪ್ರಶ್ನೆ

ಮಂಗಳೂರು, ಮೇ 23: ನಾಳೆ ರಾಜ್ಯಸರಕಾರದ ಸಂಪೂರ್ಣ ಲಾಕ್ ಡೌನ್ ಆದೇಶವನ್ನು ಸಚಿವ ಯು.ಟಿ ಖಾದರ್ ಲೇವಡಿ ಮಾಡಿದ್ದು, ಎಲ್ಲಾ ಓಪನ್ ಮಾಡಿ ಜನ ಓಡಾಡಬೇಡಿ ಅಂತಾ ಇದ್ದಾರೆ. ಇದೊಂದು ಬೇಕಾಬಿಟ್ಟಿ ಲಾಕ್ ಡೌನ್ ಎಂದರು.

ಸರಣಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು, ” ನಿನ್ನೆ ಸಂಜೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರ ಜೊತೆ ಲಾಕ್ ಡೌನ್ ವಿಚಾರವಾಗಿ ಮಾತನಾಡುತ್ತಿದ್ದೆ .ಸಂಡೇ ಲಾಕ್ ಡೌನ್ ಪರಿಕಲ್ಪನೆಯೇ ನನಗೆ ಅರ್ಥವಾಗುತ್ತಿಲ್ಲ. ದಿನಸಿ ಅಂಗಡಿ ಓಪನ್, ಮಾರುಕಟ್ಟೆ ಓಪನ್, ಹಾಲು ತರಕಾರಿ ಓಪನ್, ಎಲ್ಲಾ ಓಪನ್ ಮಾಡಿ ಜನ‌ರನ್ನ ಮಾತ್ರ ಓಡಾಡ ಬೇಡಿ ಅಂದ್ರೆ ಹೇಗೆ.?? ಒಂದೆಡೆ ಕರ್ಫ್ಯೂ ಇದೆ ಹೊರಬರಬೇಡಿ ಅಂತಾ ಹೇಳ್ತಾ ಇರೋ ಪೋಲಿಸರು ಸೆಕ್ಷನ್ 144 ಕೂಡ ಜಾರಿಯಲ್ಲಿದೆ ಅಂತಾರೆ. ಹೀಗಾಗಿ ಸಂಡೇ ಲಾಕ್ ಡೌನ್ ನ ವೈಜ್ಙಾನಿಕತೆಯೇ ಅರ್ಥವಾಗ್ತಾ ಇಲ್ಲ.

ಸಿಂಪಲ್ ಆಗಿ ಹೇಳಬೇಕು ಅಂದ್ರೆ ಇದೊಂದು ಬೇಕಾಬಿಟ್ಟಿ ಲಾಕ್ ಡೌನ್ . ಎನಿವೇ ಈ ಯು ಟರ್ನ್ ಸರ್ಕಾರ ತಜ್ಙರ ಜೊತೆ ಕುಳಿತು ತೀರ್ಮಾನಿಸೋದು ಒಳಿತು ಎಂದು ಹೇಳಿದ್ದಾರೆ