LATEST NEWS
ಮಾನಸಿಕ ರೋಗ ಬರುವ ಸೀಝನ್ ಆದ್ದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು- ಖಾದರ್
ಮಾನಸಿಕ ರೋಗ ಬರುವ ಸೀಝನ್ ಆದ್ದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು- ಖಾದರ್
ಮಂಗಳೂರು ಮಾರ್ಚ್ 11: ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿ ಕುಮಾರ್ ಅವರ ಭಯೋತ್ಪಾದಕರು ಹೇಳಿಕೆಗೆ ಸಚಿವ ಯು ಟಿ ಖಾದರ್ ತಿರುಗೇಟು ನೀಡಿದ್ದಾರೆ. ಬಿಜೆಪಿ ಕಾರ್ಯದರ್ಶಿ ರವಿ ಕುಮಾರ್ ಸಚಿವರಾದ ರಮಾನಾಥ ರೈ ಹಾಗೂ ಯು.ಟಿ ಖಾದರ್ ಭಯೋತ್ಪಾದಕರು ಎಂದು ಹೇಳಿದ್ದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿ ಕುಮಾರ್ ಮಾತಿಗೆ ತಿರುಗೇಟು ನೀಡಿದರು. ರವಿ ಕುಮಾರ್ ಮಾತಿಗೆ ನಾವು ದೊಡ್ಡ ಮಹತ್ವ ಕೊಡಬೇಕಾಗಿಲ್ಲ ಎಂದ ಅವರು ಕೆಲವರು ಬುದ್ಧಿಯ ಸ್ಥಿಮಿತ ಕಳೆದುಕೊಂಡು ಅವಿವೇಕಿಯ ತರಹ ಮಾತು ಆಡುತ್ತಿದ್ದಾರೆ ಎಂದು ಹೇಳಿದರು.
ಅವರ ವ್ಯಕ್ತಿತ್ವ ಹಾಗೆ ಇದ್ದಿರಬಹುದಾದ್ದರಿಂದ ನಮ್ಮ ಮೇಲೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು. ಮಾನಸಿಕ ರೋಗ ಬರುವ ಸೀಝನ್ ಆದ್ದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು ಎಂದು ಟಾಂಗ್ ನೀಡಿದರು. ಅಧಿಕಾರಕ್ಕೆ ಬಿಜೆಪಿಯವರು ಯಾವ ಕೆಳಮಟ್ಟಕ್ಕೂ ಹೋಗುತ್ತಾರೆ ಎನ್ನುವುದಕ್ಕೆ ಪ್ರತ್ಯೇಕವಾದಿಗಳಾಗಿರುವ ಪಿಡಿಪಿ ಅವರ ಜತೆ ಕಾಶ್ಮೀರದಲ್ಲಿ ಅಧಿಕಾರ ನಡೆಸುತ್ತಿರುವುದೇ ಸಾಕ್ಷಿ ಎಂದು ಹೇಳಿದರು.ಪ್ರತ್ಯೇಕವಾದಿಗಳು, ಭಾರತವನ್ನು ವಿರೋಧಿವವರಿಗೆ ಬಿಜೆಪಿ ಬೆಂಬಲ ನೀಡುತ್ತಿದ್ದೆ ಎಂದು ಆರೋಪಿಸಿದರು.
ನ್ಯಾಗಲ್ಯಾಂಡ್, ತ್ರಿಪುರಾದಲ್ಲೂ ಪ್ರತ್ಯೇಕವಾದಿಗಳಿಗೆ ಬೆಂಬಲಿಸಿದ್ದಾರೆ. ಮುಖ್ಯಮಂತ್ರಿಗಳನ್ನು ನರಹಂತಕ ಎಂದು ಟೀಕಿಸಲು ಇವರಿಗೆ ಯಾವ ಯೋಗ್ಯತೆಯಿದೆ? ಮತಕ್ಕಾಗಿ ಸಮಾಜವನ್ನು ವಿಭಾಗಿಸುವುದು ಇವರ ತಂತ್ರವಾಗಿದ್ದು, ಜನಸಾಮಾನ್ಯರ ನೆಮ್ಮದಿ ಕೆಡಿಸುವ ಯಾವ ಕೆಲಸವಾಗಬಾರದೆಂದು ಸೋದರನಾಗಿ ಬುದ್ಧಿ ಹೇಳುತ್ತಿದ್ದೇನೆ ಎಂದು ಹೇಳಿದರು.
You must be logged in to post a comment Login