Connect with us

LATEST NEWS

ಟೈಯರ್ ಸ್ಪೋಟ – ಮಾಬುಕಳ ಸೇತುವೆ ಡಿಕ್ಕಿ ಹೊಡೆದ ಅಂಬ್ಯುಲೆನ್ಸ್

ಉಡುಪಿ ಸಪ್ಟೆಂಬರ್ 16: ಅನಾರೋಗ್ಯ ಪೀಡಿತ ಮಗುವನ್ನು ಕರೆದುಕೊಂಡು ಬರುತ್ತಿದ್ದ ಆಂಬ್ಯುಲೆನ್ಸ್ ನ ಟೈಯರ್ ಸ್ಪೋಟಗೊಂಡು ಅಪಘಾತಕ್ಕೀಡಾದ ಘಟನೆ ಬ್ರಹ್ಮಾವರ ತಾಲೂಕು ಮಾಬುಕಳ ಸೇತುವೆ ಬಳಿ ನಡೆದಿದೆ.


ಉತ್ತರ ಕನ್ನಡ ಜಿಲ್ಲೆಯಿಂದ ಅನಾರೋಗ್ಯಪೀಡಿತ ಮಗುವನ್ನು ಕರೆತರುತ್ತಿದ್ದ ಅಂಬ್ಯುಲೆನ್ಸ್ ನ ಟೈಯರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಅಂಬ್ಯುಲೆನ್ಸ್ ಡಿವೈಡರ್ ಹಾರಿ ಸೇತುವೆಯ ಆವರಣ ಗೊಡೆಗೆ ಡಿಕ್ಕಿಯಾಗಿದೆ. ಸೇತುವೆಯ ಆವರಣಗೊಡೆಗೆ ಡಿಕ್ಕಿಯಾದ ಪರಿಣಾಮ ಅಂಬ್ಯುಲೆನ್ಸ್ ನದಿಗೆ ಉರುಳುವುದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದು, ದೊಡ್ಡ ದುರಂತ ತಪ್ಪಿದಂತಾಗಿದೆ.

ಅಪಘಾತದಲ್ಲಿ ಆಂಬುಲೆನ್ಸ್ ನಲ್ಲಿ ಮಗುವನ್ನು‌ ಕರೆದೊಯ್ಯುತ್ತಿದ್ದ ಮಹಿಳೆಗೆ ಗಾಯಗಳಾಗಿದ್ದು, ಸ್ಥಳಕ್ಕೆ ಕೋಟ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.