DAKSHINA KANNADA
ಗುಜರಿ ಹೆಕ್ಕುವ ನೆಪದಲ್ಲಿ ಕಳ್ಳತನ, ಇಬ್ಬರು ಮಹಿಳೆಯರ ಬಂಧನ
ಗುಜರಿ ಹೆಕ್ಕುವ ನೆಪದಲ್ಲಿ ಕಳ್ಳತನ, ಇಬ್ಬರು ಮಹಿಳೆಯರ ಬಂಧನ
ಮಂಗಳೂರು, ನವಂಬರ್ 8: ಒಂಟಿ ಮನೆಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಲಪಟಾಯಿಸುತ್ತಿದ್ದ ಕಳ್ಳರ ತಂಡವೊಂದನ್ನು ಮಂಗಳೂರು ಸಿಸಿಬಿ ಪೋಲೀಸರುವ ವಶಕ್ಕೆ ಪಡೆದುಕೊಂಡಿದ್ದಾರೆ. ಗುಜರಿ ಹೆಕ್ಕುವ ನೆಪದಲ್ಲಿ ಮನೆಗಳಿಗೆ ನುಗ್ಗುತ್ತಿದ್ದ ಈ ತಂಡ ಮನೆಯ ಬೀಗ ಒಡೆದು ಮನೆಯಲ್ಲಿರುವ ವಸ್ತುಗಳನ್ನು ಕಳ್ಳತನ ನಡೆಸುತ್ತಿತ್ತು. ಈ ಸಂಬಂಧ ಇಬ್ಬರು ಮಹಿಳೆಯರನ್ನು ಪೋಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕುಂಜತ್ತಬೈಲ್ ನ ಬಸವನಗರದ ಪಾರ್ವತಿ (29) ಮತ್ತು ಜಯಲಕ್ಷ್ಮಿ (27) ಬಂಧಿತ ಕಳ್ಳಿಯರಾಗಿದ್ದಾರೆ.
ಗುಜರಿ ಹೆಕ್ಕುವ ನೆಪದಲ್ಲಿ ಗುಂಪಾಗಿ ಹೊರಡುವ ಈ ಕಳ್ಳರ ತಂಡ ತನ್ನ ಕೃತ್ಯ ನಡೆಸಿದ ಬಳಿಕ ಪರಿಸರದಿಂದ ಕಾಲ್ಕೀಳುತ್ತಿತ್ತು. ಬಂಧಿತರಿಂದ ಸುಮಾರು 2.50 ಲಕ್ಷ ಮೌಲ್ಯದ 91.230 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಪಣಂಬೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login