Connect with us

    LATEST NEWS

    ಖಾಸಗಿ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡಿದವನನ್ನು ಕೊಂದು ಹೂತು ಹಾಕಿದ ವಿಧ್ಯಾರ್ಥಿನಿಯರು….!!

    ಚೆನ್ನೈ : ಪ್ರೀತಿಯ ನಾಟಕವಾಡಿ ಬಾಲಕಿಯರ ಖಾಸಗಿ ಪೋಟೋ ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ದಿದ್ದ ಕಾಲೇಜು ವಿಧ್ಯಾರ್ಥಿನಿಯನ್ನು ಕೊಲೆ ಮಾಡಿ ಹೂತು ಹಾಕಿದ್ದ ಇಬ್ಬರು 10ನೇ ತರಗತಿ ವಿಧ್ಯಾರ್ಥಿಯರನ್ನು ಪೊಲೀಸರು ಬಂಧಿಸಿದ್ದಾರೆ.


    ಕೊಲೆಯಾದ ವ್ಯಕ್ತಿ ಪ್ರೇಮಕುಮಾರ್ 10ನೇ ತರಗತಿಯ ಇಬ್ಬರು ವಿಧ್ಯಾರ್ಥಿನಿಯರ ಜೊತೆ ಜೊತೆ ಸಂಬಂಧ ಬೆಳೆಸಿದ್ದು, ಬಾಲಕಿಯರ ವೈಯಕ್ತಿಕ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೇ ಇಬ್ಬರು ಬಾಲಕಿಯರಿಂದ ತಲಾ 50 ಸಾವಿರ ರೂಪಾಯಿ ಸುಲಿಗೆ ಮಾಡಿದ್ದ. ಅಲ್ಲದೆ ಹಣ ನೀಡದೆ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ, ಈ ಹಿನ್ನಲೆ ವಿಧ್ಯಾರ್ಥಿನಿಯರು ಸೋಷಿಯಲ್ ಮೀಡಿಯಾ ಮೂಲಕ ಅಶೋಕ್ ಎಂಬ ವ್ಯಕ್ತಿ ಪರಿಚಯವಾಗಿದ್ದು, ಹುಡುಗಿಯರು ಆತನ ಬಳಿ ಸಹಾಯವನ್ನು ಕೇಳಿದ್ದಾರೆ. ಅಲ್ಲದೇ ಅವರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಆತನಿಗೆ ಹೇಳಿದ್ದಾರೆ.


    ಅಶೋಕ್ ಸಲಹೆಯ ಮೇರೆಗೆ ಹುಡುಗಿಯರು ಪ್ರೇಮಕುಮಾರ್‌ಗೆ ಕರೆ ಮಾಡಿ ಶುಕ್ರವಾರ ಸಂಜೆ ಶೋಲವರಂ ಟೋಲ್ ಪ್ಲಾಜಾಕ್ಕೆ ಬರುವಂತೆ ಹೇಳಿ, ನಂತರ ಅವನನ್ನು ಅಪಹರಿಸಿದ್ದಾರೆ. ಪ್ರೇಮಕುಮಾರ್‌ನಿಂದ ಫೋನ್ ಅನ್ನು ತೆಗೆದುಕೊಂಡು, ಅದರಲ್ಲಿರುವ ಫೋಟೋಗಳನ್ನು ಡಿಲೀಟ್​ ಮಾಡಲು ಹುಡುಗಿಯರು ಅಶೋಕ್‌ಗೆ ಹೇಳಿದ್ದಾರೆ. ಆದರೆ ಅವನು ಮತ್ತು ಅವನ ಸಹಚರರು ಬ್ಲ್ಯಾಕ್‌ಮೇಲರ್​​ನನ್ನು ಅಪಹರಿಸಿ, ಈಚಂಗಾಡು ಗ್ರಾಮಕ್ಕೆ ಕರೆದೊಯ್ದು ಕೊಲೆ ಮಾಡಿ ನಂತರ ಶವವನ್ನು ಹೂತು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಶೋಕ್ ಮತ್ತು ಆತನ ಸಹಚರರ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply