Connect with us

    DAKSHINA KANNADA

    ಮನೆಯಲ್ಲಿದ್ದ ಇಬ್ಬರು ಸಹೋದರಿಯರು ನಾಪತ್ತೆ; ದೂರು ದಾಖಲು

    ಮಂಗಳೂರು, ಫೆಬ್ರವರಿ 11: ಸಹೋದರಿಯರಿಬ್ಬರು ನಾಪತ್ತೆಯಾಗಿರುವ ಘಟನೆ‌ ನಗರದ ಬಜ್ಪೆಯ ಕೊಂಚಾರ್ ಎಂಬಲ್ಲಿ ನಡೆದಿದೆ. ಈ ಬಗ್ಗೆ ಬಜ್ಪೆ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ.

    ಬಜ್ಪೆಯ ಕೊಂಚಾರ್ ಎಂಬಲ್ಲಿನ ಬಾಡಿಗೆ ಮನೆ ನಿವಾಸಿಗಳಾದ ಮುಬೀನಾ(22) ಹಾಗೂ ಬುಶ್ರಾ (21) ನಾಪತ್ತೆಯಾದ ಸಹೋದರಿಯರಾಗಿದ್ದಾರೆ. ಮುಬೀನಾ ಹಾಗೂ ಬುಶ್ರಾ ಫೆ.7ರಂದು ರಾತ್ರಿ ಸುಮಾರು 12.30ಕ್ಕೆ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ತಡರಾತ್ರಿ 2 ಗಂಟೆಗೆ ಅವರ ತಂದೆ ಎದ್ದು ನೋಡಿದಾಗ ಕಿರಿಯ ಪುತ್ರಿ ಬುಶ್ರಾ ಮನೆಯಲ್ಲಿ ಕಂಡಿರಲಿಲ್ಲ.

    ಇದರಿಂದ ಎಲ್ಲ ಕಡೆಗಳಲ್ಲಿ ಹುಡುಕಾಟ ನಡೆಸಲಾಗಿದೆ. ಈ ಸಂದರ್ಭ ಮತ್ತೋರ್ವ ಪುತ್ರಿ ಮುಬೀನಾ ಕೂಡಾ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಎಲ್ಲೆಡೆ ಹುಡುಕಾಟ ನಡೆಸಿದ್ರೂ, ಇಬ್ಬರೂ ಪತ್ತೆಯಾಗಿಲ್ಲ ಎಂದು ಬಜ್ಪೆ ಠಾಣೆಯಲ್ಲಿ ಹೆತ್ತವರು ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply