Connect with us

    LATEST NEWS

    ಪ್ರಾರ್ಥನಾ ಮಂದಿರ ನೆಲಸಮ ಪ್ರಕರಣ – ಇಬ್ಬರು ಅರೆಸ್ಟ್

    ಮಂಗಳೂರು ಫೆಬ್ರವರಿ 22: ಮಂಗಳೂರು ಹೊರವಲಯದ ಕೂಳೂರು ಸಮೀಪದ ಪಂಜಿಮೊಗರು-ಉರುಂದಾಡಿ ಗುಡ್ಡೆ ಎಂಬಲ್ಲಿ ಫೆಬ್ರವರಿ 5 ರಂದು ಸೈಂಟ್ ಆ್ಯಂಟನಿ ಹೋಲಿ ಕ್ರಾಸ್ ಪ್ರಾರ್ಥನಾ ಕೇಂದ್ರವನ್ನು ನೆಲಸಮಗೈದ ಘಟನೆಗೆ ಸಂಬಂಧಿಸಿ ಕಾವೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.


    ಬಂಧಿತ ಆರೋಪಿಗಳನ್ನು ಬಜಪೆ ನಿವಾಸಿ ಲತೀಶ್ (25) , ಕಾವೂರು ಉರುಂದಾಡಿ‌ ನಿವಾಸಿ ಧನಂಜಯ (36) ಎಂದು ಗುರುತಿಸಲಾಗಿದೆ. ಸುಮಾರು 40 ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದ ಈ ಪ್ರಾರ್ಥನಾ ಮಂದಿರವನ್ನು ಕೆಡವಲಾಗಿತ್ತು. ಆರೋಪಿಗಳ ಬಂಧನಕ್ಕೆ ಕ್ರೈಸ್ತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ‌ಆಯುಕ್ತ ಶಶಿಕುಮಾರ್ ಎನ್ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply