LATEST NEWS
ಗಗನ ಸಖಿಯನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕ…!!
ದೆಹಲಿ: ವಿಮಾನದಲ್ಲಿ ನಡೆಯುತ್ತಿರುವ ಅಸಭ್ಯ ವರ್ತನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದೀಗ ಗಗನ ಸಖಿಯನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ ಪ್ರಯಾಣಿಕನನ್ನು ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆಯು ಕೆಳಗಿಳಿಸಿದ ಘಟನೆ ಸೋಮವಾರ ನಡೆದಿದೆ.
ಜನವರಿ 23, 2023ರಂದು ದೆಹಲಿ-ಹೈದರಾಬಾದ್ ಸ್ಪೈಸ್ಜೆಟ್ ವಿಮಾನದಲ್ಲಿ ಘಟನೆ ನಡೆದಿದೆ. ವಿಮಾನದ ಬೋರ್ಡಿಂಗ್ ವೇಳೆ ಒಬ್ಬ ಪ್ರಯಾಣಿಕರು ಸಿಬ್ಬಂದಿಯೊಂದು ಅನುಚಿತವಾಗಿ ವರ್ತಿಸಿದರು, ಹಿಂಸೆ ನೀಡಿದರು. ಅವರು ತಕ್ಷಣ ಈ ಕುರಿತು ಭದ್ರತಾ ದಳ ಹಾಗೂ ಇತರ ಸಿಬ್ಬಂದಿಗೆ ಮಾಹಿತಿ ನೀಡಿದರು. ನಂತರ ಆರೋಪಿ ಪ್ರಯಾಣಿಕ ಹಾಗೂ ಸಹಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ, ಭದ್ರತಾ ಸಿಬ್ಬಂದಿಯ ವಶಕ್ಕೆ ಒಪ್ಪಿಸಲಾಯಿತು’ ಎಂದು ಸ್ಪೈಸ್ಜೆಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಗಗನಸಖಿಯೊಬ್ಬರಿಗೆ ಹಿಂಸೆಯಾಗುವ ರೀತಿಯಲ್ಲಿ ಆರೋಪಿ ಪ್ರಯಾಣಿಕ ಅಂಗಾಂಗ ಸ್ಪರ್ಶ ಮಾಡಿದ್ದ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಆರೋಪಿ ಪ್ರಯಾಣಿಕನು ತಾನು ಅಂಥ ದುಷ್ಕೃತ್ಯ ಎಸಗಿಲ್ಲ. ಅಚಾನಕ್ ಆಗಿ ನನ್ನ ಕೈ ಅವರನ್ನು ಮುಟ್ಟಿತು. ವಿಮಾನದಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಹೀಗಾಯಿತೇ ವಿನಃ ಇದು ಉದ್ದೇಶಪೂರ್ವಕ ಕೃತ್ಯ ಅಲ್ಲ ಎಂದು ಸಮರ್ಥಿಸಿಕೊಂಡರು.
You must be logged in to post a comment Login