ರಾಷ್ಟ್ರೀಯ ಹೆದ್ದಾರಿ ದುರಸ್ಥಿಗೆ ಆಗ್ರಹಿಸಿ ಟ್ವೀಟರ್ ನಲ್ಲಿ #SaveNH75 ಅಭಿಯಾನ

ಮಂಗಳೂರು ನ.8: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ದುರಸ್ಥಿಗೆ ಆಗ್ರಹಿಸಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ #SaveNH75 ಅಭಿಯಾನ ಆರಂಭಿಸಲಾಗಿದೆ. ಮಂಗಳೂರಿನಿಂದ ಹಾಸನದವರೆಗಿನ ರಸ್ತೆ ಪರಿಸ್ಥಿತಿಯನ್ನು ಟ್ವಿಟ್ ಮೂಲಕ ಖಂಡಿಸಿ, ರಸ್ತೆ ಪೋಟೋ ಹಾಗೂ ವಿಡಿಯೋಗಳನ್ನು ಟ್ವೀಟರ್ ನಲ್ಲಿ ಶೇರ್ ಮಾಡಿ ರಸ್ತೆ ದುರಸ್ಥಿಗೆ ಜನಪ್ರತಿನಿಧಿಗಳ ಗಮನ ಸೆಳೆಯುತ್ತಿದ್ದಾರೆ.

ಹೊಂಡಗುಂಡಿಗಳ ಹೆದ್ದಾರಿಯಲ್ಲಿ ಸಂಚಾರ ಸವಾಲಾಗಿದೆ. ಈ ಅಭಿಯಾನಕ್ಕೆ ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಚೇರ್‌ಮನ್‌ ಟಿ.ವಿ. ಮೋಹನ್‌ದಾಸ್‌ ಪೈ ಅವರು ಧ್ವನಿಗೂಡಿಸಿದ್ದು, ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಟ್ಯಾಗ್‌ ಮಾಡಿ ರಾ.ಹೆ. 75ರ ದುರಸ್ತಿಗೆ ಆಗ್ರಹಿಸಿದ್ದಾರೆ. ಪ್ರಧಾನಿ ಮೋದಿ, ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ನಳಿನ್‌ ಮೊದಲಾದವರನ್ನು ಟ್ಯಾಗ್‌ ಮಾಡಲಾಗಿದೆ.