LATEST NEWS
ಉಳ್ಳಾಲ : ಸಾಲದ ಮೊದಲ ಕಂತು ಕಟ್ಟಿದ 2 ದಿನದಲ್ಲಿ ಸುಟ್ಟು ಹೋದ TVS ಸ್ಕೂಟರ್..!
ಉಳ್ಳಾಲ : ಟಿವಿಎಸ್ ಎನ್‌ಟಾರ್ಕ್ ಸ್ಕೂಟರ್ ಒಂದು ಬೆಂಕಿ ಹೊತ್ತಿಕೊಂಡು ಸಂಪೂರ್ಣ ಉರಿದು ಹೋದ ಘಟನೆ ಮಂಗಳೂರು ಹೊರವಲಯದ ಉಳ್ಳಾಲದ ಕುಂಪಲ ಸಮೀಪದ ವಿದ್ಯಾನಗರ ಎಂಬಲ್ಲಿ ನಡೆದಿದೆ.
ಐಟಿಐ ವಿದ್ಯಾರ್ಥಿ ರಾಕೇಶ್ ಎಂಬವರು ಎರಡು ತಿಂಗಳ ಹಿಂದೆಯಷ್ಟೇ ಸಾಲ ಮಾಡಿ ಸ್ಕೂಟರ್ ಖರೀದಿ ಮಾಡಿದ್ದರು. ಮೂದು ದಿನಗಳ ಹೊಇಂದೆ ಯಷ್ಟೇ ಅದರ ಸಾಲದ ಮೊದಲ ಕಂತು ಪಾವತಿ ಮಾಡಿದ್ದರು. ಮಧ್ಯರಾತ್ರಿ 12:30 ರ ಸುಮಾರಿಗೆ ಏಕಾಏಕಿ ಸ್ಕೂಟರ್ ಹೊತ್ತಿ ಉರಿದಿದ್ದು, ಬೆಂಕಿಯ ಜ್ವಾಲೆ ಮನೆಯ ಕಿಟಕಿ ಮತ್ತು ವಿದ್ಯುತ್ ತಂತಿಗಳಿಗೂ ಹಬ್ಬಿ ಅಪಾರ ನಷ್ಟ ಉಂಟು ಮಾಡಿದೆ. ಅದೃಷ್ಟವಶಾತ್, ಕುಟುಂಬವು ಆ ಸಮಯಕ್ಕೆ ಎಚ್ಚರವಾಯಿತು ಮತ್ತು ದೊಡ್ಡ ಅನಾಹುತ ಸಂಭವಿಸುವ ಮೊದಲು ಅಗ್ನಿಯನ್ನು ನಂದಿಸಿದ್ದಾರೆ. ಅದರ ಹೊರತಾಗಿಯೂ, ಆಸ್ತಿಗೆ ಸ್ವಲ್ಪ ಹಾನಿಯಾಗಿದೆ.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
You must be logged in to post a comment Login