Connect with us

    KARNATAKA

    ಕ್ಯಾನ್ ಗೆ ಪೆಟ್ರೋಲ್ ತುಂಬಿಸುವಾಗ ಹೊತ್ತಿಕೊಂಡ ಬೆಂಕಿ – ಯುವತಿ ಸಾವು…!!

    ತುಮಕೂರು, ಮೇ 20: ಸ್ಕೂಟರ್ ನಲ್ಲಿ ಕ್ಯಾನ್ ಇಟ್ಟು ಅದಕ್ಕೆ ಪೆಟ್ರೋಲ್ ತುಂಬಿಸುವಾಗ ಬೆಂಕಿ ಹೊತ್ತಿಕೊಂಡ ಪರಿಣಾಮ ಯುವತಿಯೊಬ್ಬಳು ಸಾವನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ.


    ಮೃತಳನ್ನು 18 ವರ್ಷದ ಭವ್ಯ ಎಂದು ಗುರುತಿಸಲಾಗಿದ್ದು, ಆಕೆಯ ತಾಯಿ ರತ್ನಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ ಗ್ರಾಮದ ಪೆಟ್ರೋಲ್‌ ಬಂಕ್ ನಲ್ಲಿ ಘಟನೆ ನಡೆದಿದೆ. ಬೆಂಕಿ ಹತ್ತಿಕೊಂಡು ಸ್ಕೂಟಿ ಸ್ಫೋಟಗೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


    ಶಿರಾ ತಾಲ್ಲೂಕಿನ ಜವನಹಳ್ಳಿ ನಿವಾಸಿಗಳಾದ ತಾಯಿ ರತ್ನಮ್ಮ ಮತ್ತು ಮಗಳು ಭವ್ಯ ಪೆಟ್ರೋಲ್ ಬಂಕಿಗೆ ಬಂದಿದ್ದರು. ಸ್ಕೂಟಿ ವಾಹನದ ಮೇಲೆ ಕ್ಯಾನ್ ಇಟ್ಟು ಪೆಟ್ರೋಲ್ ತುಂಬಿಸುತ್ತಿದ್ದರು. ಭವ್ಯ ಈ ವೇಳೆ, ಸ್ಕೂಟಿಯಲ್ಲಿ ಕುಳಿತುಕೊಂಡಿದ್ದು ಬೆಂಕಿ ಮೈಗೆ ಹತ್ತಿಕೊಂಡಿದೆ. ಅಕಸ್ಮಾತ್ ಬೆಂಕಿ ಹತ್ತಿದ್ದು ಪೆಟ್ರೋಲ್ ಕ್ಯಾನ್ ಸಹಿತ ಧಗ ಧಗನೆ ಹೊತ್ತಿ ಉರಿದಿದೆ.‌ ಭವ್ಯಾ ಬೆಂಕಿಯ ಜ್ವಾಲೆಯೊಂದಿಗೆ ಓಡಿ ಕೆಳಕ್ಕೆ ಬಿದ್ದಿದ್ದಾಳೆ.


    ಬಳಿಕ ಆಕೆಯನ್ನು ಶಿರಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ನಂತರ ಹೆಚ್ಚಿನ‌ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾಳೆ. ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು ವಿಡಿಯೋ ಈಗ ವೈರಲ್ ಆಗಿದೆ. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply