Connect with us

LATEST NEWS

ಪ್ರತ್ಯೇಕ ತುಳು ರಾಜ್ಯಕ್ಕೆ ಗಲಭೆ ನಡೆಸಲು ಪ್ರಚೋದನೆ – ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಆಡಿಯೋ ವೈರಲ್…!!

ಮಂಗಳೂರು ನವೆಂಬರ್ 1: ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲೇ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ಅವರ ಬೆಂಕಿ ಹಚ್ಚುವ ಆಡಿಯೋ ಒಂದು ವೈರಲ್ ಆಗಿದೆ.ಆದರೆ ತನ್ನ ವಿರುದ್ದದ ಆರೋಪವನ್ನು ಕತ್ತಲ್ ಸಾರ್​ ನಿರಾಕರಿಸಿದ್ದು, ತನ್ನ ಆಡಿಯೋವನ್ನು ತಿರುಚಲಾಗಿದೆ ಎಂದು ತಿಳಿಸಿದ್ದಾರೆ.


ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರೇ ಪ್ರತ್ಯೇಕ ರಾಜ್ಯಕ್ಕಾಗಿ ಪ್ರಚೋದನೆಯ ಮಾತುಗಳನ್ನು ಆಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ತುಳು ರಾಜ್ಯಕ್ಕಾಗಿ ಗಲಭೆ ಮಾಡಬೇಕು, ಎಲ್ಲೆಡೆ ಹೋರಾಟ ಆಗಬೇಕು. ದೊಡ್ಡ‌ ಮಟ್ಟದಲ್ಲಿ ಬ್ಲಾಸ್ಟ್ ಮಾಡಿ, ಟೈರ್​ಗಳಿಗೆ ಬೆಂಕಿ ಹಚ್ಚಬೇಕು. ಕೆಂದ್ರ ಸಚಿವ ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್​ ಸೇರಿದಂತೆ ರಾಜಕೀಯ ನಾಯಕರಿಗೆ ಬೈಯ್ಯಬೇಕು ಎಂದು ದಯಾನಂದ ಕತ್ತಲ್ ಸಾರ್ ಹೇಳಿದ್ದಾರೆ ಎನ್ನಲಾಗಿದೆ.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರದ್ದು ಎನ್ನಲಾದ ಆಡಿಯೋ ಇದಾಗಿದ್ದು, ಅದರಲ್ಲಿ ರಾಜ್ಯದ ಮೂಲೆ ಮೂಲೆಯಲ್ಲೂ ತುಳು ರಾಜ್ಯಕ್ಕಾಗಿ ಹೋರಾಟ ಆಗಬೇಕು. ಆಗ ನಮ್ಮನ್ನು ಸಂಧಾನಕ್ಕೆ ಕರೆದು ಸರ್ಕಾರದವರು ಮಾತನಾಡುತ್ತಾರೆ. ಆಗ ನಾವು ಹೋರಾಟಗಾರರನ್ನು ಸಮಾಧಾನಿಸಲು ಬೇರೆ ದಾರಿ ಇಲ್ಲ ಎಂದು ಹೇಳಬೇಕು. ತುಳು ರಾಜ್ಯ ಘೋಷಣೆ ಮಾಡಿದರಷ್ಟೇ ಸಮಾಧಾನ ಆಗ್ತಾರೆ ಎಂದು ಹೇಳಬೇಕು ಎಂಬ ಪ್ರಚೋದನಾತ್ಮಕ ಮಾತುಗಳನ್ನು ಅಕಾಡೆಮಿಯ ಅಧ್ಯಕ್ಷರು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಮೇ.29 ರಂದು ‘ನಮ್ಮ ತುಳುನಾಡು ಟ್ರಸ್ಟ್’ ಪದಾಧಿಕಾರಿಗಳ ಜೊತೆ ಕತ್ತಲ್ ಸಾರ್ ಈ ರೀತಿಯಲ್ಲಿ ತುಳುವಿನಲ್ಲಿ ಮಾತನಾಡಿದ್ದು, ಸ್ವತಃ ‘ನಮ್ಮ ತುಳುನಾಡು ಟ್ರಸ್ಟ್’ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್.ಉಳ್ಳಾಲ್ ಆಡಿಯೋ ವೈರಲ್ ಮಾಡಿದ್ದಾರೆ. ಒಂದು ವೇಳೆ ಗಲಭೆ ನಡೆದಲ್ಲಿ‌ ‘ನಮ್ಮ ತುಳುನಾಡು ಟ್ರಸ್ಟ್’ ಮೇಲೆ ಆರೋಪ ಬರುತ್ತದೆಂದು ಆಡಿಯೋ ವೈರಲ್ ಮಾಡಿರುವೆ ಎಂದು ಜಿ.ವಿ.ಎಸ್.ಉಳ್ಳಾಲ್ ಹೇಳಿದ್ದಾರೆ‌.

ಈ ಬಗ್ಗೆ ದಯಾನಂದ ಕತ್ತಲ್ ಸಾರ್ ಸ್ಪಷ್ಟನೆ ನೀಡಿ, ಈ ಆಡಿಯೋದಲ್ಲಿ ಮಾತನಾಡಿರುವುದು ತಾನೇ, ಆದರೆ ನನ್ನ ಮಾತನ್ನು ತಿರುಚಲಾಗಿದೆ. ‘ನಮ್ಮ ತುಳುನಾಡು ಟ್ರಸ್ಟ್’ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್.ಉಳ್ಳಾಲ್ ಅವರಲ್ಲಿ ತಾನು ಮಾಮೂಲಿಯಾಗಿ ಮಾತನಾಡಿದ್ದು. ಆದರೆ, ನನ್ನ ಮಾತನ್ನು ಉದ್ದೇಶಪೂರ್ವಕವಾಗಿ ತಿರುಚಿ ವೈರಲ್ ಮಾಡಲಾಗಿದೆ ಎಂದು ಹೇಳಿದ್ದಾರೆ.