ಮಂಗಳೂರು ಅಗಸ್ಟ್ 23: ಕೋಲದ ಗಗ್ಗರ ಕಟ್ಟುವ ಸಂದರ್ಭದಲ್ಲೇ 10 ಗಂಟೆ ಆಯಿತು ಎಂದು ಪೊಲೀಸ್ ಇಲಾಖೆ ಗಗ್ಗರ ತೆಗೆಯಿರಿ ಎಂದು ಹೇಳಿರುವ ಕಾಲ ಬರಬಹುದು ಎಂದು ನಾಟಕ ರಚನಕಾರ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಹೇಳಿದ್ದಾರೆ.


ತುಳುನಾಡ ಕಲಾವಿದರ ಒಕ್ಕೂಟ ವತಿಯೆಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರು ಅಥವಾ ಬೇರೆ ಕಡೆ ಇಲ್ಲದ ಕಾನೂನೂ ಇದೀಗ ಜಿಲ್ಲೆಯಲ್ಲಿ ಇದ್ದು, 10 ಗಂಟೆಗೆ ಕಾರ್ಯಕ್ರಮ ಮಗಿಸಲು ಸಾಧ್ಯವೇ ಇಲ್ಲ ಎಂದರು. ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಪ್ರಾರಂಭವಾಗುವುದು 8 ಗಂಟೆ ನಂತರ, ಪೊಲೀಸ್ ಇಲಾಖೆ ಇದೀಗ ನಾಟಕ ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಬಂದಿದ್ದು , ಮುಂದೆ ಕೋಲದ ಗಗ್ಗರ ಕಟ್ಟುವ ಸಂದರ್ಭದಲ್ಲಿ ಪೊಲೀಸರು 10 ಘಂಟೆ ಆಯಿತು ಗಗ್ಗರ ತೆಗೆಯಿರಿ ಅನ್ನುವ ಕಾಲ ಬರಬಹುದು ಎಂದರು. ಈ ಹಿನ್ನಲೆ ಜಿಲ್ಲಾಡಳಿತ ಕಾನೂನನ್ನು ಇಲ್ಲಿನ ಸಂಪ್ರದಾಯ ಆಚರಣೆ ಉಳಿಸಲು ಸಡಿಲಿಕೆ ಮಾಡಬೇಕು ಅಲ್ಲದೆ 10 ಘಂಟೆಗೆ ಒಳಗೆ ಕಾರ್ಯಕ್ರಮಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಹಾಗಾಗಿ ಜನ ಪ್ರತಿನಿಧಿಗಳು ಇದನ್ನ ಪರಿಹರಿಸಬೇಕು ಎಂದುರು. ಈಗಾಗಲೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಒದಗಿಸುವುದನ್ನು ನಿಲ್ಲಿಸುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲೀಕರ ಸಂಘ ಹೇಳಿದೆ. ಇದು ಕಲಾವಿದರಿಗೆ ದೊಡ್ಡ ಸಮಸ್ಯೆಯಾಗಿರ ಪರಿಣಮಿಸಿದೆ ಎಂದರು. ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕೆಂದು ಹೇಳಿದರು.


ತುಳುನಾಟಕ ಕಲಾವಿದರ ಒಕ್ಕೂಟ ರಂಗ ಭೂಮಿಯ ದೇವದಾಸ್ ಕಾಪಿಕಾಡ್ ಮಾತನಾಡಿ ನಾನು ರಂಗ ಭೂಮಿಗೆ ಬಂದು 38 ವರ್ಷವಾಗಿದೆ ಇಂಥ ವ್ಯವಸ್ಥೆ ಯಾವತ್ತೂ ಆಗಿಲ್ಲ , 5000 ಜನ ನಾಟಕದಲ್ಲಿ ಇದ್ರು ಸಡನ್ ಜನರೇಟರ್ ಕೊಂಡುಹೋಗುತೇನೆ ಎಂದರು . ಪ್ರೇಕ್ಷಕರು ನಾಟಕ ಇದೆಯಾ ಇಲ್ವಾ ಎಂಬ ಗೊಂದಲದಿಂದಿದ್ದರು . ಪೊಲೀಸ್ ಇಲಾಖೆಯ ಕಾನೂನಿಂದಾಗಿ ತೊಂದರೆಯಾಗಿದ್ದು, ಜನಪ್ರತಿನಿಧಿಗಳು ದಯವಿಟ್ಟು ಈ ಬಗ್ಗೆ ಗಮನಹರಿಸಬೇಕು ಎಂದರು.

Share Information