Connect with us

LATEST NEWS

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಸಂಚರಿಸುತ್ತಿದ್ದ ಕಾರು ಅಪಘಾತ..!!

ಮಂಗಳೂರು ಫೆಬ್ರವರಿ 6: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸರ್ ಸಂಚರಿಸುತ್ತಿದ್ದ ಕಾರು ಇಂದು ಮುಂಜಾನೆ ನಂತೂರು ಜಂಕ್ಷನ್ ಬಳಿ ಅಪಘಾತಕ್ಕೀಡಾಗಿದೆ. ದಯಾನಂದ ಕತ್ತಲ್ ಸರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.


ಇಂದು ಮುಂಜಾವ 5:15ರ ಸುಮಾರಿಗೆ ಕತ್ತಲ್ ಸಾರ್ ತಮ್ಮ ಕಾರಿನಲ್ಲಿ ಬಿಕರ್ನಕಟ್ಟೆಯಿಂದ ನಂತೂರು ಕಡೆಗೆ ತೆರಳುತ್ತಿದ್ದು, ನಂತೂರು ಜಂಕ್ಷನ್ ಬಳಿ ಎದುರಿನಿಂದ ಬರುತ್ತಿದ್ದ ಮೀನಿನ ಲಾರಿ ಮತ್ತು ಇವರ ಕಾರು ನಡುವೆ ಢಿಕ್ಕಿ ಸಂಭವಿಸಿದೆ.ಈ ವೇಳೆ ಕತ್ತಲ್ ಸಾರ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.