ನವದೆಹಲಿ ಡಿಸೆಂಬರ್ 29: ಟ್ರಕ್ ಒಂದು ಡಿವೈಡರ್ ತಾಗಿ ನಿಯಂತ್ರಣ ತಪ್ಪಿ ಬೊಲೆರೋ ವಾಹನದ ಮೇಲೆ ಪಲ್ಟಿಯಾದ ಪರಿಣಾಮ ಬೊಲೆರೋದಲ್ಲಿದ್ದ ಚಾಲಕ ಸಾವನಪ್ಪಿದ ಘಟನೆ ರಾಂಪುರ-ನೈನಿತಾಲ್ ಹೆದ್ದಾರಿಯ ಪಹಾಡಿ ಗೇಟ್ ಬಳಿ ಸಂಭವಿಸಿದೆ.


ಬೊಲೆರೋ ವಾಹನ ಚಾಲಕ ರಸ್ತೆಯಲ್ಲಿ ಟರ್ನ್ ತೆಗೆದುಕೊಳ್ಳಲು ಹೋಗಿದ್ದಾನೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಮರದ ಹೊಟ್ಟು ತುಂಬಿದ ಟ್ರಕ್ ನ ಎದುರಿನ ಟೈಯರ್ ರಸ್ತೆ ಡಿವೈಡರ್ ಡಿಕ್ಕಿಯಾಗಿ ಟ್ರಕ್ ಬೊಲೆರೊ ಕಾರಿನ ಮೇಲೆ ಉರುಳಿಬಿದ್ದಿದೆ.

ಈ ಅಪಘಾತದಲ್ಲಿ ಉಪವಿಭಾಗಾಧಿಕಾರಿ (ಎಸ್‌ಡಿಒ) ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದಾಗಿ ಜನನಿಬಿಡ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿ, ವಾಹನಗಳು ದೀರ್ಘಕಾಲದವರೆಗೆ ಸಿಲುಕಿಕೊಂಡವು. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಅವಶೇಷಗಳನ್ನು ತೆರವುಗೊಳಿಸಿ ತನಿಖೆ ಆರಂಭಿಸಿದರು. ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Share Information