Connect with us

LATEST NEWS

ಟಿಪ್ಪರ್ ಲಾರಿ – ಓಮ್ನಿ ನಡುವೆ ಭೀಕರ ರಸ್ತೆ ಅಪಘಾತ ಇಬ್ಬರು ಗಂಭೀರ

ಮಂಗಳೂರು ಜನವರಿ 19: ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ಮತ್ತು ಓಮ್ನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಓಮ್ನಿ ಕಾರಿನಲ್ಲಿದ್ದ ಇಬ್ಬರು ತೀವ್ರ ಗಾಯಗೊಂಡ ಘಟನೆ ಕಿನ್ಯ ಗ್ರಾಮದ ನಡುಕುಮೇರ್ ಪಡುವಳ್ ಫಾರ್ಮ್ಸ್ ಬಳಿ ನಡೆದಿದೆ.

ಕೆ.ಸಿ ನಗರದ ಪೂಮಣ್ಣು ನಿವಾಸಿ ನೂರುದ್ದೀನ್ ಹಾಗೂ ಇಮ್ರಾನ್  ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇರಳ ನೊಂದಣಿಯ ಟಿಪ್ಪರ್ ಲಾರಿ ಮರಳನ್ನು ತುಂಬಿಕೊಂಡು ದೇರಳಕಟ್ಟೆ ಕಡೆಗೆ ಸಾಗುತ್ತಿದ್ದು, ಈ ವೇಳೆ ನಾಟಿಕಲ್ ನಿಂದ ಕೆ.ಸಿ ರೋಡ್ ಕಡೆಗೆ ಬರುತ್ತಿದ್ದ ಓಮ್ನಿ ಕಾರು ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರುಗಡೆ ದಿನ ನಿತ್ಯ ನೂರಾರು ಟಿಪ್ಪರುಗಳು ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಾಟ ಆಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ  ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೊಂದು ರಾಷ್ಟ್ರೀಯ ಹೆದ್ದಾರಿ ತಪ್ಪಿಸಿಕೊಂಡು ಬರುವ ದೊಡ್ಡ ಕಳ್ಳ ದಾರಿ ಆಗಿದೆ ಎಂದು ಆರೋಪಿಸಿದ್ದಾರೆ.