ಮಂಗಳೂರು ಮಹಾನಗರಪಾಲಿಕೆ ಪರಿಸರ ಕಾಳಜಿ ಸ್ಥಳಾಂತರಗೊಂಡ ಬೃಹತ್ ಅಶ್ವತ ಮರ

ಮಂಗಳೂರು ಡಿಸೆಂಬರ್ 9: ಮಂಗಳೂರಿನಲ್ಲಿ ಮತ್ತೊಂದು ಬೃಹತ್ ಮರ ತೆರವು ಕಾರ್ಯಾಚರಣೆ ಇಂದು ನಡೆಯಿತು. ಮರವನ್ನು ಕತ್ತರಿಸುವ ಬದಲು ಮರವನ್ನು ಬುಡಸಮೇತ ಸ್ಥಳಾಂತರಗೊಳಿಸುವ ಮೂಲಕ ಮಂಗಳೂರು ಮಹಾನಗರಪಾಲಿಕೆ ಪರಿಸರ ಕಾಳಜಿಯನ್ನು ತೋರಿಸಿದೆ.

ಮಂಗಳೂರು ಮಹಾ ನಗರ ಪಾಲಿಕೆ ನಗರ ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿ ರಸ್ತೆ ಅಗಲೀಕರಣದ ಕಾಮಗಾರಿ ನಡೆಸುತ್ತಿದ್ದು. ಈ ಸಂದರ್ಭದಲ್ಲಿ ಅಲ್ಲಿರುವ ಬೃಹತ್ ಅಶ್ವತ್ಥ ಮರವನ್ನು ಕಡಿಯಲು ಪಾಲಿಕೆ ಅಧಿಕಾರಿಗಳು ಮಂದಾಗಿದ್ದರು. ಮರ ಕಡಿಯಲು ಸಾರ್ವಜನಿಕರು ಹಾಗೂ ಭಜರಂಗದಳ ಅಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಶ್ವತ್ಥ ಮರವನ್ನು ಕಡಿಯದೆ ಅಲ್ಲಿದ್ದ ಬೇರೆ ಕಡೆ ಸ್ಥಳಾಂತರ ಮಾಡಲು ಪಾಲಿಕೆ ಅಧಿಕಾರಿಗಳು ಯೋಜನೆ ಕಾರ್ಯಯೋಜನೆ ರೂಪಿಸಿದ್ದರು.

ರಜಾ ದಿನವಾದ ಭಾನುವಾರ ಮುಂಜಾನೆ 5 ಗಂಟೆಗೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮರ ಸ್ಥಳಾಂತರಕ್ಕೆ ಕಾರ್ಯಾಚರಣೆ ಆರಂಭಿಸಿದ್ದರು. ಪಾಲಿಕೆ ಅಧಿಕಾರಿಗಳು, ಪರಿಸರ,ಅರಣ್ಯ, ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬಂದಿ ವರ್ಗ ಸುಮಾರು 40 ಟನ್ ತೂಕರ ಬೃಹತ್ ಮರವನ್ನು ಬುಡ ಸಮೇತ ತೆಗೆದು ಬೃಹತ್ ಕ್ರೇನ್ ಮೂಲಕ ಸಿವಿ ನಾಯಕ್ ಹಾಲ್ ಸಮೀಪದ ಸ್ಥಳದಲ್ಲಿ ಮರು ನೆಡಲಾಯಿತು.

ಸುಮಾರು 15 ಗಂಟೆಗಳ ಕಾರ್ಯಾಚರಣೆ ನಡೆಸಲಾಗಿದ್ದು , ಪಾಲಿಕೆ ಆಯುಕ್ತರಾದ ಮೊಹಮ್ಮದ್ ನಜೀರ್ ,ಹಾಗೂ ಸ್ಥಳೀಯ ಪಾಲಿಕೆ ಸದಸ್ಯ ಅಶೋಕ್ ಡಿ.ಕೆ ಅವರು ಸ್ಥಳದಲ್ಲೇ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

ವಿಡಿಯೋಗಾಗಿ …

5 Shares

Facebook Comments

comments