Connect with us

    LATEST NEWS

    ರಾಜ್ಯಸರಕಾರ ಅನುದಾನ ಕೊರತೆ ತಣ್ಣೀರುಬಾವಿ ಟ್ರೀಪಾರ್ಕ್‍ನ ಪ್ರವೇಶ ಶುಲ್ಕ ಏರಿಕೆ

    ರಾಜ್ಯಸರಕಾರ ಅನುದಾನ ಕೊರತೆ ತಣ್ಣೀರುಬಾವಿ ಟ್ರೀಪಾರ್ಕ್‍ನ ಪ್ರವೇಶ ಶುಲ್ಕ ಏರಿಕೆ

    ಮಂಗಳೂರು ಮಾರ್ಚ್ 13: ಮಂಗಳೂರಿನಲ್ಲಿರುವ ಟ್ರೀಪಾರ್ಕ್‍ನ ನಿರ್ವಹಣೆಗಾಗಿ ಸರ್ಕಾರದಿಂದ ಅನುದಾನ ಬಾರದೇ ಇರುವುದರಿಂದ ತಣ್ಣೀರು ಬಾವಿ ಟ್ರೀಪಾರ್ಕ್‍ನ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗುವುದು ಎಂದು ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್ ತಿಳಿಸಿದ್ದಾರೆ.

    ಇಂದು ನಡೆದ ಬೆಂಗರೆ ತಣ್ಣೀರುಬಾವಿ ಟ್ರೀಪಾರ್ಕ್‍ನ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ಅವರು ಟ್ರೀಪಾರ್ಕ್‍ನ ಪ್ರವೇಶ ಶುಲ್ಕ 6 ವರ್ಷದೊಳಗಿನ ಮಕ್ಕಳಿಗೆ ವಿನಾಯಿತಿ ಇದ್ದು, 6 ರಿಂದ 14 ವರ್ಷ ಪ್ರಾಯದವರಿಗೆ ರೂ.10 ಮತ್ತು 14 ವರ್ಷ ಮೇಲ್ಪಟ್ಟವರಿಗೆ ರೂ.20 ಹಾಗೂ ಸಾಮಾನ್ಯ ಕ್ಯಾಮರ ಉಪಯೋಗಕ್ಕೆ ರೂ.25, ಝೂಂ ಕ್ಯಾಮರ/ ಹ್ಯಾಂಡಿ ಕ್ಯಾಮರ ಬಳಸುವುದಕ್ಕೆ ರೂ.50, ಸ್ಟ್ಯಾಂಡ್ ಕ್ಯಾಮರ ಬಳಸುವುದಕ್ಕೆ ರೂ.100 ಮತ್ತು ಫೋಟೋ ಶೂಟ್‍ಗಳಿಗೆ ರೂ.200 ರಂತೆ ಪರಿಷ್ಕರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

    ಪರಿಷ್ಕೃತ ಬೆಲೆ ಎಪ್ರಿಲ್ 1 ರಿಂದ ಜಾರಿಗೆ ಬರುವುದು. ಈ ವರೆಗೆ ಟ್ರೀಪಾರ್ಕ್‍ನಿಂದ ರೂ.26,26,000 ಆದಾಯ ಬಂದಿದ್ದು, ಅದರಲ್ಲಿ 2018-19ನೇ ಸಾಲಿನಲ್ಲಿ ಟ್ರೀ ಪಾರ್ಕ್‍ನ ವಿದ್ಯುತ್ ವೆಚ್ಚದ ಬಿಲ್ಲು, ನೀರಿನ ವೆಚ್ಚದ ಬಿಲ್ಲು ಮತ್ತು ಟ್ರೀಪಾರ್ಕ್ ಸ್ವಚ್ಛಗೊಳಿಸುವವರ ವೇತನ ಬಾಕಿ ಪಾವತಿಸಲು ಸಭೆಯಲ್ಲಿ ತಿಳಿಸಲಾಯಿತು.

    Share Information
    Advertisement
    Click to comment

    You must be logged in to post a comment Login

    Leave a Reply