ಮರ ಕಡಿಯುವಾಗ ಆಕಸ್ಮಿಕವಾಗಿ ಹಗ್ಗ ಕುತ್ತಿಗೆ ಸಿಲುಕಿ ವ್ಯಕ್ತಿಯೋರ್ವ ಮರದಲ್ಲೇ ಸಾವು

ಪುತ್ತೂರು ಫೆಬ್ರವರಿ 13: ಮರದ ಕೊಂಬೆ ಕಡಿಯುವ ಸಂದರ್ಭದಲ್ಲಿ ಕೊಂಬೆ ಕಡಿಯಲು ಉಪಯೋಗಿಸುವ ಹಗ್ಗ ಕುತ್ತಿಗೆಗೆ ಬಿಗಿದು ವ್ಯಕ್ತಿಯೋರ್ವ ಮರದಲ್ಲೇ ಸಾವನ್ನಪ್ಪಿದ ಘಟನೆ ಸುಬ್ರಹ್ಮಣ್ಯ ಸಮೀಪದ ನೂಚಿಲ ಎಂಬಲ್ಲಿ ನಡೆದಿದೆ.

ಸಾವಿಗೀಡಾದ ವ್ಯಕ್ತಿಯನ್ನು ಸುನಿಲ್ ಅರಂಪಾಡಿ ಎಂದು ಗುರುತಿಸಲಾಗಿದ್ದು, ಬೃಹದಾಕಾರದ ಮರದ ಕೊಂಬೆ ಕತ್ತರಿಸಲು ಮರವೇರಿದ್ದ ಸಂದರ್ಭದಲ್ಲಿ ಈ ಘಟನೆ ನೆಡೆದಿದೆ‌. ಸಾವನ್ನಪ್ಪಿದ ಕಾರಣ ಮರದಲ್ಲೇ ಆತನ ಶವ ನೇತಾಡುತ್ತಿದ್ದು, ಘಟನೆಯನ್ನು ಗಮನಿಸಿದ ಸ್ಥಳೀಯರು ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸುಬ್ರಹ್ಮಣ್ಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಮರದಿಂದ ಕೆಳಗೆ ಇಳಿಸಿ ಪ್ರಕರಣ ದಾಖಲಿಸಿದ್ದಾರೆ.