ಮುಂಗಾಲು ಮುರಿದ ಕಾಡಾನೆಗೆ ವೈದ್ಯರಿಂದ ಚಿಕಿತ್ಸೆ

ಪುತ್ತೂರು ಮೇ 10: ಸುಬ್ರಹ್ಮಣ್ಯ ಅರಣ್ಯ ವಲಯದ ಬಾಳುಗೋಡು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಲಿಗೆ ಗಾಯ ಮಾಡಿಕೊಂಡ ಕಾಡಾನೆಗೆ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದೆ.

ನಾಗರಹೊಳೆಯಿಂದ ನುರಿತ ಡಾಕ್ಟರ್ ಮುಜೀಬ್ ಮತ್ತು ಗುತ್ತಿಗಾರು ಪಶುವೈದ್ಯರಾದ ವೆಂಕಟಾಚಲಪತಿ ಹಾಗೂ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳ ತಂಡ ಇಂದು ಆನೆಯಿದ್ದ ಸ್ಥಳಕ್ಕೆ ಭೇಟಿ ನೀಡಿ ಆನೆಗೆ ಚಿಕಿತ್ಸೆ ನೀಡಿದರು.

ಅರಿವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ನಿಯಂತ್ರಣಕ್ಕೆ ತಂದ ವೈದ್ಯರ ತಂಡ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಆನೆಯ ಚಲನವಲನಗಳನ್ನು ಗಮನಿಸಲು ಇದೇ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳ ತಂಡವನ್ನೂ‌ ನಿಯೋಜಿಸಲಾಗಿದೆ.

VIDEO