ಬೆಂಗಳೂರು ಮಾರ್ಚ್ 04: ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿದ್ದರೂ, ಇಸ್ರೇಲ್ ಅಮೇರಿಕಾ ಇರಾನ್ ಮಧ್ಯೆ ಉಂಟಾದ ಉದ್ವಿಗ್ನತೆ ಹಿನ್ನೆಲೆ ಇದೀಗ ಸಿನೆಮಾ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ. ಸಿನಿಮಾ ರಿಲೀಸ್ಗೆ ಕೆಲವೇ ದಿನ ಬಾಕಿ ಇರುವಾಗ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿದೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹೊಸ ರಿಲೀಸ್ ದಿನಾಂಕವನ್ನು ಕೂಡ ಘೋಷಣೆ ಮಾಡಲಾಗಿದೆ. ಜೂನ್ 4ರಂದು ಸಿನಿಮಾ ರಿಲೀಸ್ ಆಗಲಿದೆ.

ಚಿತ್ರತಂಡದ ಹೇಳಿಕೆ ಪ್ರಕಾರ, ಅಂತರರಾಷ್ಟ್ರೀಯ ಪರಿಸ್ಥಿತಿ ಮತ್ತು ವಿದೇಶಿ ಮಾರುಕಟ್ಟೆಗಳ ಅನಿಶ್ಚಿತತೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಗಲ್ಫ್ ರಾಷ್ಟ್ರಗಳು ಕನ್ನಡ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆಯಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ‘ಧುರಂಧರ್ 2’ ಅಲ್ಲಲ್ಲಿ ಬಿಡುಗಡೆಯಾಗದಿರುವ ಹಿನ್ನಲೆಯಲ್ಲಿ, ಆ ಮಾರುಕಟ್ಟೆಯನ್ನು ಬಳಸಿಕೊಳ್ಳಲು ‘ಟಾಕ್ಸಿಕ್’ ತಂಡ ಯೋಜನೆ ರೂಪಿಸಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಿಂದ ಆ ಯೋಜನೆ ತಾತ್ಕಾಲಿಕವಾಗಿ ಅಡಚಣೆಗೊಳಗಾಗಿದೆ.

‘ಟಾಕ್ಸಿಕ್’ ಮುಂದೂಡಿಕೆಗೆ ‘ಧುರಂಧರ್ 2’ ಕಾರಣ ಎಂಬ ಚರ್ಚೆಗಳು ಸಿನಿ ವಲಯದಲ್ಲಿ ಕೇಳಿಬರುತ್ತಿವೆ. ಆದರೆ ಚಿತ್ರತಂಡ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. “ನಮ್ಮ ಪಾಲುದಾರರು ಮತ್ತು ವಿದೇಶಿ ವಿತರಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ” ಎಂದು ಮಾತ್ರ ಹೇಳಲಾಗಿದೆ.
‘ಟಾಕ್ಸಿಕ್’ ಸಿನಿಮಾವನ್ನು KVN Productions ನಿರ್ಮಿಸುತ್ತಿದ್ದು, ನಟ Yash ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಈ ಚಿತ್ರವನ್ನು Geetu Mohandas ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ Kiara Advani, Rukmini Vasanth ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಭಾರೀ ಬಜೆಟ್ ಹಾಗೂ ಪ್ಯಾನ್-ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಜೂನ್ 4ರಂದು ಸಿನಿಮಾ ರಿಲೀಸ್ ಆಗಲಿದೆ.