Connect with us

LATEST NEWS

ಕಾರ್ಕಳದಲ್ಲಿ ಬೀಸಿದ ಬಿರುಗಾಳಿಗೆ ಗದ್ದೆಯಲ್ಲಿದ್ದ ನೀರು ಮೇಲ್ಮುಖವಾಗಿ ಚಿಮ್ಮಿದ ವಿಡಿಯೋ ವೈರಲ್

ಕಾರ್ಕಳದಲ್ಲಿ ಬೀಸಿದ ಬಿರುಗಾಳಿಗೆ ಗದ್ದೆಯಲ್ಲಿದ್ದ ನೀರು ಮೇಲ್ಮುಖವಾಗಿ ಚಿಮ್ಮಿದ ವಿಡಿಯೋ ವೈರಲ್

ಉಡುಪಿ ಅಗಸ್ಟ್ 1: ಕಾರ್ಕಳದಲ್ಲಿ ಬೀಸಿದ ಬಿರುಗಾಳಿಗೆ ಗದ್ದೆಯಲ್ಲಿದ್ದ ನೀರು ಮೇಲ್ಮುಖವಾಗಿ ಚಿಮ್ಮಿರುವ ದೃಶ್ಯವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾರ್ಕಳ ತಾಲೂಕಿನ ಪೆರ್ವಾಜೆಯಲ್ಲಿ ಈ ಘಟನೆ ನಡೆದಿದ್ದು, ಗುರುವಾರ ಬೆಳಿಗ್ಗೆ ಬೀಸಿದ ಭಾರಿ ಬಿರುಗಾಳಿಗೆ ಕಾರ್ಕಳ ಪುರಸಭಾ ವ್ಯಾಪ್ತಿಯ ಪೆರುವಾಜೆಯಲ್ಲಿ ಹಲವು ಮನೆಗಳಿಗೆ ಹಾನಿ‌ಮಾಡಿದೆ. ಪೆರ್ವಾಜೆ ಪರಿಸರದ ಸುಮಾರು 3 ಮನೆಗಳು ತೋಟ ಕೂಡ ಹಾನಿಗೊಳಗಾಗಿದ್ದು ಹಲವಾರು ಮರಗಳು ಧರೆಗುರುಳಿದೆ. ಬಿರುಗಾಳಿಯ ರಭಸಕ್ಕೆ ಗದ್ದೆಯಲ್ಲಿದ್ದ ನೀರು ಮೇಲ್ಮುಖವಾಗಿ ಚಿಮ್ಮಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಲ್ಲದೆ ಗದ್ದೆಯಲ್ಲಿದ್ದ ನವಿಲು ಕೂಡ ನೀರಿನೊಂದಿಗೆ ಮೇಲಕ್ಕೆ ಚಿಮ್ಮಿ, ತೇಲಾಡುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗುರುವಾರ ಬೆಳಗ್ಗಿನ ಹೊತ್ತು ವೇಗದ ಗಾಳಿ ಬೀಸಿ ದೂರದಲ್ಲಿ ಕಂಡಾಗ ಸುರಳಿ ಹೊಗೆ ಆಕಾಶದತ್ತ ಲಂಬವಾಗಿ ಸಂಚರಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ಬಾರಿಯೂ ಕಾರ್ಕಳದಲ್ಲಿ ಬಿರುಗಾಳಿ ಎದ್ದಿತ್ತು ಆದರೆ ಇಷ್ಟೊಂದು ವೇಗದ ಮತ್ತು ಹಾನಿಕಾರಕ ಬಿರುಗಾಳಿ ಇದೇ ಮೊದಲ ಬಾರಿಗೆ ಕಂಡು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

VIDEO

Facebook Comments

comments