Connect with us

LATEST NEWS

ದಕ್ಷಿಣಕನ್ನಡ ಜಿಲ್ಲೆಯಲ್ಲಿ 500 ರ ಗಡಿ ದಾಟಿದ ಕೊರೊನಾ ಸೊಂಕಿತರ ಸಂಖ್ಯೆ

ಮಂಗಳೂರು ಜೂನ್ 25: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 33 ಕೊರೊನಾ ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 519ಕ್ಕೆ ಏರಿಕೆಯಾಗಿದೆ. ಇಂದು ದೃಢಪಟ್ಟ 33 ಪ್ರಕರಣಗಳಲ್ಲಿ 10 ಮಂದಿ ಸೌದಿಯ 5, ಕತಾರ್ ನ 5, ದಮಾಮ್ ನ 4 ಮಂದಿಗೆ ಕೊರೊನಾ ದೃಢಪಟ್ಟಿದೆ. ಇನ್ನು 4 ಮಂದಿ ILE ಪ್ರಕರಣ, 2 SARI ಪ್ರಕರಣ ದಾಖಲಾಗಿದೆ. ಇಂದು ದಾಖಲಾದ ಪ್ರಕರಣಗಳಲ್ಲಿ ಒಬ್ಬರು ಉಡುಪಿ ಪ್ರಯಾಣ ಹಿಸ್ಟರಿ ಹೊಂದಿದ್ದರೆ ಮತ್ತೊಬ್ಬರಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯೇ ಇಲ್ಲ.

ಇಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ 32 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 366 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಸದ್ಯ 143 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 10 ಮಂದಿ ಕೊರೊನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.


ಇನ್ನು ಉಡುಪಿಯಲ್ಲಿ ಇಂದು 9 ಕೊರೊನಾ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಉಡುಪಿಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 1125 ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ 9 ಪ್ರಕರಣಗಳಲ್ಲಿ ಬೆಂಗಳೂರಿನಿಂದ ಆಗಮಿಸಿದ 3 ಮಂದಿ ಹಾಗೂ ಸೌದಿ ಹಾಗೂ ಮಸ್ಕತ್ ನಿಂದ ಆಗಮಿಸಿದ ಒಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟಿದೆ.

ಉಡುಪಿಯಲ್ಲಿ ಇಂದು 17 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಡುಪಿಯಲ್ಲಿ ಇವರೆಗೆ 1028 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಸದ್ಯ 95 ಕೊರೊನಾ ಸೊಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Facebook Comments

comments