Connect with us

    LATEST NEWS

    ಆಟೋ ಪಾರ್ಕಿಂಗ್ ಗೆ ನುಗ್ಗಿದ ಲಾರಿ – ನಾಲ್ಕು ಆಟೋ ಜಖಂ

    ಕುಂದಾಪುರ ನವೆಂಬರ್ 30: ಆಟೋ ಪಾರ್ಕಿಂಗ್ ಗೆ ಟಿಪ್ಪರ್ ಲಾರಿಯೊಂದು ನುಗ್ಗಿದ ಪರಿಣಾಮ ನಾಲ್ತು ಆಟೋ ರಿಕ್ಷಾಗಳು ಜಖಂ ಆದ ಘಟನೆ ತ್ರಾಸಿ ಸಮೀಪದಗ ಮುಳ್ಳಿಕಟ್ಟೆ ಕ್ರಾಸ್ ಬಳಿ ನಡೆದಿದೆ.


    ಬೈಂದೂರು ಕಡೆ ತೆರಳುತ್ತಿದ್ದ ಟಿಪ್ಪರ್ ಲಾರಿ ಮುಳ್ಳಿಕಟ್ಟೆ ಕ್ರಾಸ್ ಬಳಿ ತಿರುವು ತೆಗೆದುಕೊಂಡ ವೇಳೆ ನಿಯಂತ್ರಣ ತಪ್ಪಿದ ಟಿಪ್ಪರ್ ಬದಿಯಲ್ಲಿರುವ ಆಟೋ ಸ್ಟ್ಯಾಂಡ್ ಒಳಕ್ಕೆ ನುಗ್ಗಿದೆ. ಪರಿಣಾಮ ಪಾರ್ಕಿಂಗ್ ನಲ್ಲಿದ್ದ 4 ಆಟೋಗಳು ನಜ್ಜುಗುಜ್ಜಾಗಿವೆ. ಆಟೋ ಚಾಲಕರು ಅಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಟಿಪ್ಪರ್ ಚಾಲಕನ ಅಜಾಗರುಕತೆ, ಅತಿಯಾದ ವೇಗ ಮತ್ತು ನಿರ್ಲಕ್ಷ್ಯತನ ಕಾರಣ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಗಂಗೊ ಳ್ಳಿ ಪಿಎಸ್ಐ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply