Connect with us

    BANTWAL

    ಹಿಟಾಚಿ ಸಹಿತ ಮನೆ ಮೇಲೆ ಬಿದ್ದ ಟಿಪ್ಪರ್ ಲಾರಿ – ಓರ್ವ ಗಂಭೀರ

    ಬಂಟ್ವಾಳ ಜುಲೈ 08: ಹಿಟಾಚಿಯನ್ನು ಸಾಗಿಸುತ್ತಿದ್ದ ಸಂದರ್ಭ ಟಿಪ್ಪರ್ ಲಾರಿ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಬಿದ್ದಿ ಘಟನೆ ಅಮ್ಟಾಡಿಯ ಕೆಂಪುಗುಡ್ಡೆ ಕ್ರಾಸ್ ಎಂಬಲ್ಲಿ ನಡೆದಿದ್ದು, ಘಟನೆಯಲ್ಲಿ ಟಿಪ್ಪರ್ ಕ್ಲಿನರ್ ಗಂಭೀರವಾಗಿ ಗಾಯಗೊಂಡಿದ್ದಾರೆ.


    ಗಾಯಗೊಂಡವರನ್ನು ಟಿಪ್ಪರ್ ನಲ್ಲಿದ್ದ ವಿಠಲ್ ಎಂದು ಗುರುತಿಸಲಾಗಿದೆ. ಹಿಟಾಚಿಯನ್ನು ಟಿಪ್ಪರ್ ಲಾರಿ ಮೂಲಕ ಬೇರೆ ಕಡೆ ಕೊಂಡೊಯ್ಯುವಾಗ ಚಾಲಕನ ನಿಯಂತ್ರಣ ತಪ್ಪಿ ಹಿಟಾಚಿ ಸಮೇತ ಟಿಪ್ಪರ್ ಲಾರಿ ಮನೆಯ ಮೇಲೆ ಬಿದ್ದಿದೆ. ಈ ಸಂದರ್ಭ ಟಿಪ್ಪರ್ ನಲ್ಲಿದ್ದ ವಿಠಲ್ ಅವರು ಟಿಪ್ಪರ್ ನ ಅಡಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಅವರನ್ನು ಬಿ.ಸಿ.ರೋಡಿನ ವಿಜಯಲಕ್ಷ್ಮಿ ಕ್ರೇನ್ ತಕ್ಷಣ ಸ್ಥಳಕ್ಕೆ ತೆರಳಿ ಟಿಪ್ಪರನ್ನು ಮೇಲಕ್ಕೆತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


    ಘಟನೆಯಲ್ಲಿ ನಾರಾಯಣ ಭಂಡಾರಿ ಅವರ ಮನೆ ಸಂಪೂರ್ಣ ಜಖಂಗೊಂಡಿದ್ದು, ಮನೆ ಮಂದಿಗೆ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ

    Share Information
    Advertisement
    Click to comment

    You must be logged in to post a comment Login

    Leave a Reply