ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು

ಮಂಗಳೂರು ಮೇ 22; ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ದಕ್ಷಿಣಕನ್ನಡ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದ್ದು, ಮತ ಎಣಿಕೆ ನಡೆಯುವ ಕೇಂದ್ರ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿರ್ಮಿಸಲಾಗಿದೆ.

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಈ ಬಾರಿ ಸುರತ್ಕಲ್ ನ ಎನ್ ಐಟಿಕೆ ಆವರಣದಲ್ಲಿ ನಡೆಯಲಿದೆ. ಗುರುವಾರ ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಪ್ರತಿ ಅಸೆಂಬ್ಲಿ ಕ್ಷೇತ್ರದ ಎಲ್ಲ್ಲ ಹಂತಗಳ ಮತ ಎಣಿಕೆ ಪೂರ್ಣವಾದ ಕೂಡಲೇ 5 ಬೂತ್‌ಗಳ ವಿವಿ ಪ್ಯಾಟ್ ಎಣಿಕೆ ನಡೆಸಿ ತಾಳೆ ಮಾಡಲಾಗುವುದು.

‍ಒಟ್ಟು 8 ಅಸೆಂಬ್ಲಿ ಕ್ಷೇತ್ರಗಳಿಗೆ ಮತ ಎಣಿಕೆಗಾಗಿ 14 ಎಣಿಕೆ ಟೇಬಲ್‌ಗಳನ್ನು ಎಣಿಕಾ ಕೇಂದ್ರದೊಳಗೆ ವ್ಯವಸ್ಥೆ ಮಾಡಲಾಗಿದೆ. ಬೆಳ್ತಂಗಡಿ 18, ಮೂಡುಬಿದಿರೆ 16, ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ತಲಾ 18, ಮಂಗಳೂರು 15, ಬಂಟ್ವಾಳ 18, ಪುತ್ತೂರು 16 ಹಾಗೂ ಸುಳ್ಯ 17 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಅಂಚೆ ಮತ ಎಣಿಕೆ ಹಾಗೂ ಅಂಚೆ ಇಲೆಕ್ಟ್ರಾನಿಕ್ ಮತ ಎಣಿಕೆ ಕಾರ್ಯವನ್ನು ಪ್ರತ್ಯೇಕವಾಗಿ ಇವಿಎಂ ಮತ ಎಣಿಕೆಗೆ ಮುನ್ನ ಕೈಗೊಳ್ಳಲಾಗುವುದು ಎಂದರು.

ಮತ ಎಣಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮೇ 22ರ ಸಾಯಂಕಾಲ 6ರಿಂದ 24ರ ಸಾಯಂಕಾಲ 6ರ ವರೆಗೆ ನಿಷೇಧಾಜ್ಞೆ (ಸೆಕ್ಷನ್ 144)ಹೇರಲಾಗುತ್ತದೆ. ಈ ಅವಧಿಯಲ್ಲಿ ಮೆರವಣಿಗೆ, ಸಾರ್ವಜನಿಕ/ರಾಜಕೀಯ ಸಭೆ ನಿಷೇಧ. ಶಸ್ತ್ರಾಸ್ತ್ರ, ಸ್ಫೋಟಕ ಸಾಗಾಟ ನಿಷೇಧಿಸಲಾಗಿದ್ದು, ಸುಡು ಮದ್ದುಗಳ ಬಳಕೆಗೂ ಅವಕಾಶವಿಲ್ಲ. 22ರಂದು ಸಾಯಂಕಾಲ 5ರಿಂದ ಮೇ 23ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಎನ್‌ಐಟಿಕೆ ಒಳಗೆ ಮತ್ತು ಮುಂಭಾಗ ರಾಷ್ಟ್ರೀಯ ಹೆದ್ದಾರೆ 66ರಲ್ಲಿ ತಡೆಬೇಲಿ ನಿರ್ಮಿಸಲಾಗುತ್ತಿದೆ. ಎನ್‌ಐಟಿಕೆ ಮುಂಭಾಗ ತಡೆಬೇಲಿ ರಚಿಸಲಾಗಿದೆ. ಶೀಟ್ ಅಳವಡಿಕೆ ಕಾರ್ಯ ಭರದಿಂದ ನಡೆಯುತ್ತಿದೆ. ಕಾರ್ಯಕರ್ತರಿಗೆ ಈ ಬಾರಿ ಮತ ಎಣಿಕೆ ಮುಂಭಾಗ ನಿಲ್ಲಲೂ ಅವಕಾಶವಿಲ್ಲ. ದೂರದ ತಡಂಬೈಲ್ ಮತ್ತು ಮುಕ್ಕ ವ್ಯಾಪ್ತಿವರೆಗೆ ಬಿಗಿ ಪೊಲೀಸ್‌ ಕಾವಲು ಇರಲಿದ್ದು, ಮತ ಎಣಿಕೆಯ ಘೋಷಣೆ ಕೇಳಲು ಮೈಕ್‌ಗಳನ್ನು ಅಳವಡಿಸಲಾಗಿದೆ.

ಎನ್‌ಐಟಿಕೆ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಚುನಾವಣ ಗುರುತಿನ ಚೀಟಿ ಹೊಂದಿರುವವರು ಮಾತ್ರ ಕೊಠಡಿಯೊಳಗೆ ಪ್ರವೇಶಿಸಬೇಕು, ಬೇರೆಯವರಿಗೆ ಅವಕಾಶವಿಲ್ಲ. ವೀಕ್ಷರ ಸಮ್ಮುಖ ಮತ ಎಣಿಕೆ ನಡೆಯಲಿದ್ದು ಟೇಬಲ್ ಅಳವಡಿಕೆ ಕಾರ್ಯ ನಡೆಸಲಾಗಿದೆ.
ಎಣಿಕಾ ನಡೆಸುವ ಅಧಿಕಾರಿಗಳು, ಏಜೆಂಟರು ಮತದಾನದ ರಹಸ್ಯ ಕಾಪಾಡಲು ಮೊಬೈಲ್ ಕೊಂಡೊಯ್ಯುದನ್ನು ನಿಷೇಧಿಸಲಾಗಿದೆ.

ಮೇ 23ರಂದು ಬೆಳಗ್ಗೆ 8ಕ್ಕೆ ಎಣಿಕೆ ಆರಂಭವಾಗಲಿದ್ದು, ಮೊದಲು ಬ್ಯಾಲೆಟ್ ಪೇಪರ್‌ ಎಣಿಕೆ ಮುಗಿದ ಅನಂತರ ಇವಿಎಂ, ವಿವಿಪ್ಯಾಟ್ ಎಣಿಕೆ ನಡೆಯಲಿದೆ. ಮಧ್ಯಮ ದವರಿಗಾಗಿ ಪ್ರತ್ಯೇಕ ಕೊಠಡಿ ಮತ್ತು ಮಾಹಿತ ಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

Facebook Comments

comments