ಬೆಂಗಳೂರು ಡಿಸೆಂಬರ್ 29: ಮೈಸೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪುಟಾಣಿ ಬೆಕ್ಕಿಗೂ ಟಿಕೆಟ್ ನೀಡಲಾಗಿದ್ದು, ಈ ಕುರಿತಂತೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಸ್ ಟಿಕೆಟ್ ಹಾಗೂ ಬೆಕ್ಕಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೊದಲ್ಲಿರುವ ಟಿಕೆಟ್‌ನಲ್ಲಿ ಬಸ್ಸು ಡಿಸೆಂಬರ್ 26ರಂದು ಮೈಸೂರಿನಿಂದ ಮಡಿಕೇರಿಗೆ ಪ್ರಯಾಣಿಸಿರುವ ಉಲ್ಲೇಖವಿದೆ.
ಇದಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ. ‘ಇನ್ಮುಂದೆ ಬೆಕ್ಕಿಗೂ ಪಾಸ್ ಸಿಗಬೇಹುದೇ?’ ಎಂದು ಕೆಲವರು ಕೇಳಿದ್ದಾರೆ.
ಪ್ರಯಾಣಿಕರಿಗೆ ತೊಂದರೆಯಾಗದಂತೆ (ಪ್ಯಾಕ್ಡ್ ವ್ಯವಸ್ಥೆಯಲ್ಲಿ) ಬೆಕ್ಕು ಅಥವಾ ನಾಯಿಯಂತಹ ಸಾಕು ಪ್ರಾಣಿಗಳನ್ನು ಸಾರಿಗೆ ಬಸ್‌ಗಳಲ್ಲಿ ತೆಗೆದುಕೊಂಡು ಹೋಗಲು ಅವಕಾಶವಿದೆ.
ಸೀಟು ಖಾಲಿ ಇದ್ದರೆ ಅಥವಾ ಮಾಲೀಕರ ತೊಡೆ ಮೇಲೆ ಕೂರಿಸಿಕೊಂಡು ಹೋಗುವಂತಿದ್ದರೆ ಟಿಕೆಟ್ ಪಡೆಯಬೇಕಿಲ್ಲ. ಆದರೆ, ಸೀಟುಗಳು ಖಾಲಿಯಿಲ್ಲದಿದ್ದರೂ ಸಾಕು ಪ್ರಾಣಿಯನ್ನು ಸೀಟಿನ ಮೇಲೆ ಕೂರಿಸಿಕೊಂಡು ಹೋಗಬೇಕೆಂದರೆ ಅರ್ಧ ಟಿಕೆಟ್ ತೆಗೆದುಕೊಳ್ಳಲೇಬೇಕು.



