Connect with us

    LATEST NEWS

    ಕೋಟ ಮಣೂರು ಸಮೀಪ ಅಂಬುಲೆನ್ಸ್, ಲಾರಿ ನಡುವೆ ಭೀಕರ ಅಪಘಾತ – ಮೂವರು ದುರ್ಮರಣ

    ಕೋಟ ಮಣೂರು ಸಮೀಪ ಅಂಬುಲೆನ್ಸ್, ಲಾರಿ ನಡುವೆ ಭೀಕರ ಅಪಘಾತ – ಮೂವರು ದುರ್ಮರಣ

    ಉಡುಪಿ ಅಕ್ಟೋಬರ್ 27: ಅಂಬುಲೆನ್ಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಸ್ಥಳದಲ್ಲಿಯೇ ಮೂರು ಮಂದಿ ಮೃತಪಟ್ಟಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯವಾಗಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಮಣೂರು ಸಮೀಪ ನಡೆದಿದೆ.

    ಮೃತರೆಲ್ಲರೂ ಉತ್ತರ ಕನ್ನಡ ಮೂಲದವರು ಎಂದು ಗುರುತಿಸಲಾಗಿದೆ. ಮೃತರು ಉಲ್ಲಾಸ್ ತಳೇಕರ್, ಅವರ ಸಂಬಂಧಿಕ ಅಶೋಕ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ. ಈ ಅಪಘಾತದಲ್ಲಿ ಇಬ್ಬರು ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ.

    ಉಲ್ಲಾಸ್ ತಳೇಕರ್ ಎಂಬವರಿಗೆ ಜಾಂಡೀಸ್ ಆಗಿತ್ತು. ಉಲ್ಲಾಸ್ ಜೊತೆ ಕುಟುಂಬಸ್ಥರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಬರುತ್ತಿದ್ದರು. ಈ ವೇಳೆ ಉಡುಪಿಯ ಕೋಟ ಮಣೂರು ಬಳಿ ಲಾರಿ ಮತ್ತು ಅಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಅಪಘಾತದಲ್ಲಿ ಸಾಧನಾ ಉಲ್ಲಾಸ್ ತಳೇಕರ್ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೂರು ಮೃತದೇಹಗಳನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಘಟನಾ ಸ್ಥಳಕ್ಕೆ ಕೋಟ್ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply