LATEST NEWS
ಬಾಲಿವುಡ್ ಡ್ರಗ್ಸ್ ಜಾಲದಲ್ಲಿ ಮತ್ತೆ ಮೂವರು ನಟಿಯರು ಭಾಗಿ, ತನಿಖೆಯ ವೇಳೆ ಸತ್ಯ ಬಿಚ್ಚಿಟ್ಟ ರಿಯಾ ಚಕ್ರವರ್ತಿ
ಬಾಲಿವುಡ್ ಡ್ರಗ್ಸ್ ಜಾಲದಲ್ಲಿ ಮತ್ತೆ ಮೂವರು ನಟಿಯರು ಭಾಗಿ, ತನಿಖೆಯ ವೇಳೆ ಸತ್ಯ ಬಿಚ್ಚಿಟ್ಟ ರಿಯಾ ಚಕ್ರವರ್ತಿ
ಮುಂಬೈ, ಸೆಪ್ಟಂಬರ್ 12: ಬಾಲಿವುಡ್ ನಲ್ಲಿ ಹರಡುತ್ತಿರುವ ಡ್ರಗ್ಸ್ ಜಾಲದಲ್ಲಿ ಮತ್ತೆ ಹಲವು ನಟಿಯರ ಹೆಸರುಗಳು ಕೇಳಿ ಬರಲಾರಂಭಿಸಿದೆ.
ನಟ ಸುಶಾಂತ್ ಸಿಂಗ್ ಸಾವಿನ ಹಿಂದೆ ಡ್ರಗ್ಸ್ ಜಾಲದ ಕೈವಾಡವಿರುವ ಬಗ್ಗೆ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ಸುಶಾಂತ್ ಸಿಂಗ್ ರಜಪೂತ್ ಸ್ನೇಹಿತೆ ರಿಯಾ ಚಕ್ರವರ್ತಿ ಸೇರಿದಂತೆ ಹಲವು ಡ್ರಗ್ಸ್ ವ್ಯಾಪಾರಿಗಳನ್ನು ಈಗಾಗಲೇ ಬಂಧಿಸಿದೆ.
ಬಾಲಿವುಡ್ ನಲ್ಲಿ ಡ್ರಗ್ಸ್ ದಂಧೆಯ ಕುರಿತು ತನಿಖೆ ಕೈಗೆತ್ತಿಕೊಂಡಿರುವ ಎನ್.ಸಿ.ಬಿ ಅಧಿಕಾರಿಗಳಿಗೆ ರಿಯಾ ಚಕ್ರವರ್ತಿ ತನ್ನ ಜೊತೆಗೆ ಡ್ರಗ್ಸ್ ಸೇವನೆ ಮಾಡುತ್ತಿದ್ದ ಮೂವರು ನಟಿಯರ ಹೆಸರನ್ನು ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದಾಳೆ.
ನಟಿಯರಾದ ಸಿಮೊನ್ ಕಂಬಾಟ, ರಕುಲ್ ಪ್ರೀತ್ ಸಿಂಗ್ ಮತ್ತು ಸಾರಾ ಅಲಿ ಖಾನ್ ರಿಯಾ ಜೊತೆಗೆ ಡ್ರಗ್ಸ್ ಜಾಲದಲ್ಲಿ ತೊಡಗಿಕೊಂಡಿದ್ದು, ಎನ್.ಸಿ.ಬಿ ಅಧಿಕಾರಿಗಳು ಈ ಮೂವರನ್ನೂ ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ.
ಬಾಲಿವುಡ್ ನಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಒಟ್ಟು 25 ಜನರ ಪಟ್ಟಿ ಇದೀಗ ಎನ್.ಸಿ.ಬಿ ಅಧಿಕಾರಿಗಳ ಬಳಿಯಿದ್ದು, ಡ್ರಗ್ಸ್ ಜೊತೆಗೆ ಬಾಲಿವುಡ್ ನಲ್ಲಿ ಹಣದ ಹೂಡಿಗೆ ಮಾಡುವ ವಿಚಾರದಲ್ಲೂ ಮುಂದಿನ ದಿನಗಳಲ್ಲಿ ತನಿಖೆ ಆರಂಭಗೊಳ್ಳಲಿದೆ.
ಡಿ ಕಂಪನಿಯಿಂದ ಬಾಲಿವುಡ್ ಗೆ ಹಣ ತರುವ ವಿಚಾರದಲ್ಲಿ ಬಾಲಿವುಡ್ ನ ಹೆಸರಾಂತ ನಿರ್ದೇಶಕನ ಹೆಸರೂ ಈ ವಿಚಾರದಲ್ಲಿ ಕೇಳಿ ಬರುತ್ತಿದ್ದು, ಈತ ಹೊಸ ಮುಖಗಳನ್ನು ಬಾಲಿವುಡ್ ಗೆ ಪರಿಚಯಿಸುವ ಕೆಲಸವನ್ನೂ ಮಾಡುತ್ತಿದ್ದಾನೆ.
ಈ ಕುರಿತೂ ತನಿಖೆ ಸದ್ಯದಲ್ಲೇ ಆರಂಭಗೊಳ್ಳಲಿದ್ದು, ಬಾಲಿವುಡ್ ನ ಮುಖವಾಡ ಒಂದೊಂದೇ ಸಾರ್ವಜನಿಕವಾಗಿ ಕಳಚುವ ಸಾಧ್ಯತೆಯೂ ಇದೆ.
Facebook Comments
You may like
ಮುಕೇಶ್ ಅಂಬಾನಿ ನಿವಾಸದ ಬಳಿ ಜಿಲೆಟಿನ್ ಸ್ಪೋಟ ಪತ್ತೆ
ಕೇರಳ ಮತ್ತು ಮುಂಬೈಯಿಂದ ಬರುವವರಿಗೆ ಆರ್.ಟಿ.ಪಿ.ಸಿ.ಆರ್ ಕಡ್ಡಾಯ : ಸಂಸದೆ ಶೋಭಾ
ಜಿಮ್ ಟ್ರೈನರ್ ಜೊತೆ ಲವ್ವಲ್ಲಿ ಬಿದ್ದ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್
ರಿಪಬ್ಲಿಕ್ ಭಾರತ್ ಚಾನೆಲ್ ನ ನಿರೂಪಕ ಕೊರೊನಾಗೆ ಬಲಿ
ಮುಂಬೈ ಜೀವನಾಡಿ ಲೋಕಲ್ ಟ್ರೈನ್ ಗೆ ಶಿರಬಾಗಿ ನಮಿಸಿದ ಪ್ರಯಾಣಿಕ
ಸಾಮಾಜಿಕ ಜಾಲತಾಣದಲ್ಲಿ ಪರಿಚಯ 13 ವರ್ಷದ ಬಾಲಕಿಯನ್ನು ಮುಂಬೈಗೆ ಕರೆಸಿ ಸಾಮೂಹಿಕ ಅತ್ಯಾಚಾರ
You must be logged in to post a comment Login