Connect with us

MANGALORE

ವೃದ್ಧ ತಾಯಿ ಮೇಲೆ ಅಮಾನುಷ ಹಲ್ಲೆ – ಆರೋಪಿ ಮಗ ಮತ್ತು ಮೊಮ್ಮಕ್ಕಳ ಬಂಧನ

ಪುತ್ತೂರು ಜುಲೈ 17: ವೃದ್ಧ ತಾಯಿ ಮೇಲೆ ಅಮಾನುಷ ಹಲ್ಲೆ ನಡೆಸಿದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಗ ಮತ್ತು ಮೊಮ್ಮಕ್ಕಳ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿಯ ಹಲಸಿನಕಟ್ಟೆ 5 ಸೆನ್ಸ್ ಕಾಲನಿ ನಿವಾಸಿ ಶ್ರೀನಿವಾಸ ಶೆಟ್ಟಿ ಮತ್ತು ಅವರ ಮಗ ಪ್ರದೀಪ್ ಶೆಟ್ಟಿ ಸೇರಿಕೊಂಡು ವೃದ್ದೆ ತಾಯಿ ಅಪ್ಪಿ ಶೆಡ್ತಿಯವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಹಲ್ಲೆ ಸಂದರ್ಭ ಇನ್ನೊಬ್ಬ ಮೊಮ್ಮಗ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.


ಈ ಹಿನ್ನಲೆ ಪ್ರಕರಣ ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ಮಗ ಶ್ರೀನಿವಾಸ ಶೆಟ್ಟಿ, ಮೊಮ್ಮಗ ಪ್ರದೀಪ್ ಶೆಟ್ಟಿ‌ ಹಾಗೂ ಇನ್ನೋರ್ವನ ಬಂಧಿಸಿ ಆರೋಪಿಗಳ ವಿರುದ್ಧ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ‌ ಹಾಗೂ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ವೃದ್ಧೆಯನ್ನು ಆರೈಕೆಗಾಗಿ ಹಿರಿಯ ನಾಗರಿಕ ಪಾಲನಾ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.


ಮಕ್ಕಳಿಂದ ಹಲ್ಲೆಗೊಳಪಟ್ಟ ಈ ವೃದ್ದೆ ಒಂದು ಕಾಲದಲ್ಲಿ ಪ್ರಖ್ಯಾತ ಸೂಲಗಿತ್ತಿಯಾಗಿದ್ದರು. ಸವಣಾಲು ಗ್ರಾಮದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿರುವ ಇವರು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಸಂದರ್ಭ ಗ್ರಾಮದಲ್ಲಿ ಯಾರೇ ಗರ್ಭಧರಿಸಿದರೂ ಹೆರಿಗೆಯನ್ನು ಇವರೇ ಮಾಡುತ್ತಿದ್ದರು. ಸುಮಾರು 50ಕ್ಕೂ ಅಧಿಕ ಯಶಸ್ವಿ ಹೆರಿಗೆ ಮಾಡಿಸಿದ ಕೀರ್ತಿ ಈ ಅಪ್ಪಿ ಶೆಡ್ತಿಯವರಿಗೆ ಇದೆ.

 

Facebook Comments

comments