ಗಾಜಾ ಸೆಪ್ಟೆಂಬರ್ 18: ಇಸ್ರೇಲ್ ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಮತ್ತೆ ಮೊಂಡು ವಾದ ಮುಂದುವರೆಸಿರುವ ಹಮಾಸ್ ಉಗ್ರರ ಮೇಲೆ ಇದೀಗ ಇಸ್ರೇಲ್ ಮುಗಿಬಿದ್ದಿದೆ. ಇಡೀ ಗಾಜಾಪಟ್ಟಿಯನ್ನು ವಶಕ್ಕೆ ಪಡೆಯಲು ಇಸ್ರೇಲ್ ಸೇನೆ ಮುಂದಾಗಿದ್ದು, ಈಗಾಗಲೇ ಅಂತರ್ಜಾಲ ಮತ್ತು ದೂರವಾಣಿ ಸಂಪರ್ಕ ವನ್ನು ಸಂಪೂರ್ಣ ಬಂದ್ ಮಾಡಿದೆ. ಅಲ್ಲದೆ ಮಾಧ್ಯಮಗಳಿಗೂ ಪ್ರವೇಶವನ್ನು ನಿರಾಕರಿಸಲಾಗಿದೆ.


ಇಸ್ರೇಲ್‌ ಸೇನೆ ಗುರುವಾರವೂ ಗಾಜಾ ನಗರದ ಮೇಲೆ ದಾಳಿ ಮುಂದುವರಿಸಿದೆ. ದೊಡ್ಡ ಟ್ಯಾಂಕ್‌ಗಳು ಗುರುವಾರ ಗಾಜಾ ನಗರವನ್ನು ತಲುಪಿವೆ. ಭೂ, ವಾಯು ಮಾರ್ಗವಾಗಿ ಇಸ್ರೇಲ್‌ ನಿರಂತರ ದಾಳಿ ನಡೆಸುತ್ತಿದೆ.
ಆಂಬುಲೆನ್ಸ್‌ಗೆ ಕರೆ ಮಾಡಲು ಮತ್ತು ಇಸ್ರೇಲ್‌ ನೀಡಿದ ಎಚ್ಚರಿಕೆಯಂತೆ ಗಾಜಾ ಪಟ್ಟಿಯ ದಕ್ಷಿಣಕ್ಕೆ ತೆರಳುವ ಸಂಬಂಧ ತಮ್ಮವರೊಂದಿಗೆ ಚರ್ಚಿಸಲು ದೂರವಾಣಿ ಸಂಪರ್ಕ ಇಲ್ಲದೆ ಜನರು ಪರದಾಡುವಂತಾಗಿದೆ.
ನಿರಾಶ್ರಿತರ ಶಿಬಿರಗಳು, ಆಶ್ರಯ ತಾಣಗಳು, ಆಸ್ಪತ್ರೆಗಳು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಇಸ್ರೇಲ್‌ ಸೇನೆ ದಾಳಿ ನಡೆಸುತ್ತಿದೆ. ‘ಆಸ್ಪತ್ರೆಗಳೂ ಸೇರಿದಂತೆ ಇಡೀ ಗಾಜಾವು ಸುರಕ್ಷಿತವಾಗಿಲ್ಲ ಎಂಬುದಕ್ಕೆ ಈ ದಾಳಿಗಳು ಸಾಕ್ಷ್ಯ ಒದಗಿಸುತ್ತಲಿವೆ’ ಎಂದು ಇಲ್ಲಿ ಮಾನವೀಯ ಸಹಕಾರ ಒದಗಿಸುವ ಸಂಸ್ಥೆಯೊಂದು ಹೇಳಿದೆ.

Share Information