Connect with us

    LATEST NEWS

    ಸಾವಿರಕ್ಕೂ ಹೆಚ್ಚು ಮಂದಿಯ ಬಲವಂತದ ಮತಾಂತರ : ಇಬ್ಬರನ್ನು ಬಂಧಿಸಿದ ಎಟಿಎಸ್..!

    ಉತ್ತರ ಪ್ರದೇಶ, ಜೂನ್ 22 : ಸಾವಿರಕ್ಕೂ ಅಧಿಕ ಮಂದಿಯನ್ನು ಬಲವಂತವಾಗಿ ಮತಾಂತರ ಮಾಡಿರುವ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಉತ್ತರ ಪ್ರದೇಶ ಭಯೋತ್ಪಾದಕ ನಿಗ್ರಹ ದಳ ಯಶಸ್ವಿಯಾಗಿದೆ.

    ಉತ್ತರ ಪ್ರದೇಶ, ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇವರು ಅಸಹಾಯಕರನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದರು ಎನ್ನಲಾಗಿದೆ. ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ(ATS) ಇಬ್ಬರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐಗೆ ಸೇರಿದವರು ಎಂದು ವರದಿಯಾಗಿದೆ.

    ಜತೆಗೆ ಅದರಿಂದ ಧನಸಹಾಯ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಬಂಧಿತ ಇಬ್ಬರು ಪಾಕಿಸ್ತಾನದ ISI ಏಜೆಂಟ್​ರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂಬ ಮಾಹಿತಿ ಸಹ ಬಹಿರಂಗಗೊಂಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಉತ್ತರ ಪ್ರದೇಶ ಎಡಿಜಿ ಪ್ರಶಾಂತ್ ಕುಮಾರ್​, ಆರೋಪಿಗಳನ್ನು ಜಹಾಂಗೀರ್​ ಮತ್ತು ಉಮರ್​ ಗೌತಮ್ ಎಂದು ಗುರುತಿಸಲಾಗಿದೆ.

    ಇಲ್ಲಿಯವರೆಗೆ ಸಾವಿರಕ್ಕೂ ಅಧಿಕ ಕಿವುಡ ಮತ್ತು ಮೂಕ ಮಕ್ಕಳನ್ನು ಮತಾಂತರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಮುಖವಾಗಿ ಕಿವುಡ ವಿದ್ಯಾರ್ಥಿಗಳು, ಅತಿ ಕಡಿಮೆ ಆದಾಯ ಹೊಂದಿರುವ ಉದ್ಯೋಗಿಗಳು ಹಾಗೂ ಹೆಣ್ಣು ಮಕ್ಕಳಿಗೆ ವಿವಾಹದ ಆಮಿಷ ಒಡ್ಡುವ ಮೂಲಕ ಮತಾಂತರಗೊಳಿಸುತ್ತಿದ್ದರು ಎಂದು ತಿಳಿಸಿದ್ದಾರೆ.

    ಅದಕ್ಕಾಗಿ ಐಎಸ್​ಐ ಮತ್ತು ವಿದೇಶಗಳಿಂದಲೂ ಹಣ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ನವದೆಹಲಿಯ ಜಾಮಿಯಾ ನಗರದಿಂದ ಇವರ ಬಂಧನ ಮಾಡಲಾಗಿದ್ದು, ವಿಚಾರಣೆ ನಡೆಸಿದಾಗ ಸಾವಿರಕ್ಕೂ ಹೆಚ್ಚು ಜನರ ಮತಾಂತರಗೊಳಿಸಿರುವುದಾಗಿ ಹೇಳಿಕೊಂಡಿದ್ದಾರೆ.

    ಇವರ ವಿರುದ್ಧ ವಿವಿಧ ಸೆಕ್ಷನ್​ಗಳ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿರುವ ಎಡಿಜಿ ಪ್ರಶಾಂತ್ ಕುಮಾರ್​, ನೋಯ್ಡಾ, ಕಾನ್ಪುರ, ಮಥುರಾ ಮತ್ತು ವಾರಾಣಸಿ ಸೇರಿದಂತೆ ಇನ್ನೂ ಅನೇಕ ಸ್ಥಳಗಳಲ್ಲಿ ಈ ಜನರು ಮತಾಂತರದ ದಂಧೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply