ಮಂಡ್ಯ ನವೆಂಬರ್ 12: ರಾಷ್ಟ್ರಪ್ರಶಸ್ತಿ ವಿಜೇತ ಸಿನೆಮಾ ತಿಥಿಯ ಪ್ರಮುಖ ನಟ ಗಡ್ಡಪ್ಪ ಖ್ಯಾತಿಯ ಚನ್ನೇಗೌಡ ಅವರು ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ.

ಗಡ್ಡಪ್ಪ ಅವರು ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದವರು. ಅವರು ‘ತಿಥಿ’ ಸಿನಿಮಾದಲ್ಲಿ ಗಡ್ಡಪ್ಪ ಹೆಸರಿನ ಪಾತ್ರ ಮಾಡಿ ಫೇಮಸ್ ಆದರು. ಎಲ್ಲರೂ ಅವರನ್ನು ಗಡ್ಡಪ್ಪ ಎಂದೇ ಗುರುತಿಸುತ್ತಿದ್ದರು.
ಗಡ್ಡಪ್ಪ ಅವರಿಗೆ ಕೆಲ ವರ್ಷಗಳ ಹಿಂದೆ ಪಾರ್ಶ್ವ ವಾಯು ಆಗಿತ್ತು. ಇದರಿಂದ ಚೇತರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಅಲ್ಲದೆ ಹೃದಯ ಸಂಬಂಧಿ ಕಾಯಿಲೆ, ಕೆಮ್ಮು ಮತ್ತು ಉಬ್ಬಸ, ಶ್ರವಣದೋಷ ಮತ್ತು ಇತರ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದವು. ಗಡ್ಡಪ್ಪ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಇಂದು (ನವೆಂಬರ್ 12) ಚಿಕಿತ್ಸೆ ಫಲಿಸದೆ ಇಹಲೋಕದ ಪ್ರಯಾಣ ಮುಗಿಸಿದ್ದಾರೆ.
ಇದನ್ನೂ ಓದಿ ಸ್ನೇಹಿತರ ಜೊತೆ ಮದ್ಯ ಸೇವಿಸಿದ 13ರ ಬಾಲಕ – ಅಪ್ಪನಿಗೆ ಗೊತ್ತಾದ್ರೆ ಎಂಬ ಭಯದಲ್ಲಿ ಆತ್ಮಹತ್ಯೆ
2015 ರಲ್ಲಿ ತೆರೆಗೆ ಬಂದ ಸೂಪರ್ ಹಿಟ್ ಸಿನೆಮಾ ತಿಥಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿತ್ತು. ಈ ಸಿನಿಮಾದಲ್ಲಿ ಗಡ್ಡಪ್ಪ ಹೆಸರಿನ ಪಾತ್ರ ಮಾಡಿದ್ದ ಚನ್ನೇಗೌಡ ಅದೇ ಹೆಸರಿನಿಂದ ಖ್ಯಾತಿ ಪಡೆದಿದ್ದರು.





