ಮಂಗಳೂರು ಸೆಪ್ಟೆಂಬರ್ 18: ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಪಾದಚಾರಿಗೆ ಗಳಿಗೆ ರಸ್ತೆ ದಾಟಲು ಅವಕಾಶ ನೀಡುವ ವೇಳೆ ಏಕಾಏಕಿ ಸ್ಕೂಟರ್ ಸವಾರನೊಬ್ಬ ನುಗ್ಗಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಲ್ಲದೆ , ಬಳಿಕ ಬಂದು ಪೊಲೀಸ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ ಘಟನೆ ನಿನ್ನೆ ಮಂಗಳೂರು ನಗರದಲ್ಲಿ ನಡೆದಿದ್ದು, ಈ ಸಂಬಂಧಿತ ವೀಡಿಯೋ ವೈರಲ್ ಆಗಿದೆ.

ಬಲ್ಮಠ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಸಿಬಂದಿ ಪಾದಚಾರಿಗಳಿಗೆ ರಸ್ತೆ ದಾಟಲು ಅವಕಾಶ ಕಲ್ಪಿಸಲು ವಾಹನಗಳನ್ನು ನಿಲ್ಲಿಸಿದ್ದಾರೆ. ಈ ವೇಳೆ ಸ್ಕೂಟರ್ ಸವಾರನೊಬ್ಬ ಸ್ಕೂಟರ್ ನಿಲ್ಲಿಸದೆ ನುಗ್ಗಿಸಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿ ಆತನನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಸ್ಕೂಟರ್ ಸವಾರ ಮುಂದೆ ಹೋಗಿ ಗಾಡಿ ನಿಲ್ಲಿಸಿ ವಾಪಸ್ ಬಂದು ಪೊಲೀಸ್ ಸಿಬ್ಬಂದಿಯ ಜೊತೆ ಗಲಾಟೆಗೆ ನಿಂತಿದ್ದಾನೆ.
ಇದನ್ನೂ ಓದಿ…… ಯೆಯ್ಯಾಡಿ ಜಂಕ್ಷನ್ ನಲ್ಲಿ ಭೀಕರ ರಸ್ತೆ ಅಪಘಾತ – ಯುವ ಇಂಜಿನಿಯರ್ ಕೌಶಿಕ್ ಸಾವು
ಈ ಘಟನೆಯ ವೀಡಿಯೋ ಬಳಿಕ ವೈರಲ್ ಆಗಿತ್ತು. ಘಟನೆಯ ಸತ್ಯಾಸತ್ಯತೆಯ ಬಗ್ಗೆ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. ಸ್ಕೂಟರ್ ಸವಾರ ಟ್ರಾಫಿಕ್ ಸಿಗ್ನಲ್ ನ್ನು ಉಲ್ಲಂಘಿಸಿ ಬಳಿಕ ಟ್ರಾಫಿಕ್ ಪೊಲೀಸ್ ಜತೆಗೇ ಕಿರಿಕ್ ಮಾಡಿದ್ದಾನೆ. ಇಲ್ಲಿ ಪೊಲೀಸ್ ಸಿಬಂದಿ ಯಾವುದೇ ತಪ್ಪೆಸಗಿಲ್ಲ.
ಕೆಲವೊಂದು ಸಂದರ್ಭಗಳಲ್ಲಿ ಪೊಲೀಸರೇ ಅಸಾಹಾಯಕ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕೆಲವು ಮಂದಿ ಸುಶಿಕ್ಷಿತ ಅಜ್ಞಾನಿಗಳು ಈ ರೀತಿಯ ಕಿರಿಕ್ ಮಾಡಿ ಹೀರೋ ಆಗಲು ಮುಂದಾಗುತ್ತಾರೆ. ಈ ಸ್ಕೂಟರ್ ಸವಾರನ ವಿರುದ್ಧ ಪ್ರಕರಣ ದಾಖಲಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.



