Connect with us

DAKSHINA KANNADA

ಕೊಣಾಜೆಯಲ್ಲಿ ಮನೆಗೆ ಕನ್ನ ಹಾಕಿರುವ ಕಳ್ಳರು: 700 ಗ್ರಾಂ ಗೂ ಅಧಿಕ ಚಿನ್ನಾಭರಣ ಕಳವು

ಮಂಗಳೂರು, ಮಾರ್ಚ್ 25 : ಮನೆಗೆ ಕನ್ನ ಹಾಕಿರುವ ಕಳ್ಳರು ಸುಮಾರು 700 ಗ್ರಾಂ ಗೂ ಅಧಿಕ ಚಿನ್ನಾಭರಣ ಮತ್ತು ಸುಮಾರು ಐದು ಲಕ್ಷ ರೂ. ನಗದು ಕಳವು ಮಾಡಿದ ಘಟನೆ ಮಂಗಳೂರು ಹೊರವಲಯದ ಕೊಣಾಜೆಯಲ್ಲಿ ನಡೆದಿದೆ.

ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಜಾಲ್ ನಿವಾಸಿ ಅಬೀಬ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ಮನೆಯ ಬೆಡ್ ರೂಂನಲ್ಲಿದ್ದ ಕಪಾಟಿನಿಂದ ಚಿನ್ನಾಭರಣ ಕಳವು ಮಾಡಿದ್ದಾರೆ.

ಅಬೀದ್ ಅವರು ಅಡಕೆ ವ್ಯಾಪಾರಿ ಯಾಗಿದ್ದು ಅಡಕೆ ವ್ಯವಹಾರದ ಹಣವನ್ಬು ನಿನ್ನೆ ಮನೆಗೆ ತಂದಿದ್ದರು. ಅಕ್ಕನ ‌ಮಗಳ ‌ಮದುವೆಯ ಹಿನ್ನಲೆಯಲ್ಲಿ ಬ್ಯಾಂಕ್ ನ ಲಾಕರ್ ನಲ್ಲಿಟ್ಟಿದ್ದ ಬಂಗಾರವನ್ನು ಮನೆಗೆ ತಂದಿದ್ದರು.

ಕೊಣಾಜೆ ಪೊಲೀಸರು ಸ್ಥಳದಲ್ಲಿ ಇದ್ದು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಕಳವಾದ ಚಿನ್ನಾಭರಣ ಮೌಲ್ಯ 20 ಲಕ್ಷಕ್ಕೂ ಅಧಿಕ ಎಂದು ಪೊಲೀಸ್ ಮೂಲಗಳು ತಿಳಿಸಿವೆ.