Connect with us

    BELTHANGADI

    ದೇಶಸೇವೆ ಮಾಡುವ ಯೋಧನ ಮನೆಯಲ್ಲಿ ಕಳ್ಳತನ

    ದೇಶಸೇವೆ ಮಾಡುವ ಯೋಧನ ಮನೆಯಲ್ಲಿ ಕಳ್ಳತನ

    ಬೆಳ್ತಂಗಡಿ ಜುಲೈ 22: ಭಾರತೀಯ ಭೂಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧನ ಮನೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.

    ಕಳೆದ 16 ವರ್ಷಗಳಿಂದ ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾರ್ಯಾತಡ್ಕ ಮಾನಿಂಗೇರಿ ನಿವಾಸಿಯಾದ ಥೋಮಸ್ ಫಿಲಿಫ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.

    ಥೋಮಸ್ ಫಿಲಿಫ್ ತಂದೆ ಫಿಲಿಪ್ ಹಾಗೂ ತಾಯಿ ರೋಸ್ಲಿ ಚರ್ಚ್ ಗೆ ಹೋದ ಸಂದರ್ಭದಲ್ಲಿ ದುಷ್ಕರ್ಮಿಗಳು ಮನೆಯ ಹಿಂದಿನ ಬಾಗಿಲನ್ನು ಮುರಿದು ಮನೆಯ ಒಳ ಪ್ರವೇಶಿಸಿ ಮನೆಯಲ್ಲಿದ್ದ ಪೀಠೋಪಕರಣಗಳು ಹಾಗೂ ಇನ್ನಿತರ ವಸ್ತುಗಳನ್ನು ಹಾಳುಮಾಡಿ ಮನೆಯಲ್ಲಿದ್ದ 18.000 ನಗದನ್ನು ದೋಚಿ ಪರಾರಿಯಾಗಿದ್ದಾರೆ.

    ಯೋಧರ ತಂದೆತಾಯಿ ಚರ್ಚ್ ನಿಂದ ಮರಳಿ ಮನೆಗೆ ಬಂದಾಗ ಈ ಘಟನೆಯು ಬೆಳಕಿಗೆ ಬಂದಿದ್ದು, ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply