Connect with us

    LATEST NEWS

    ಈ ರಾಷ್ಟ್ರದಲ್ಲಿ ಮದುವೆಯಾಗ ಬೇಕಾದರೆ ವರ್ಜಿನಿಟಿ ಟೆಸ್ಟ್ ಕಡ್ಡಾಯ!

    ರಬತ್, ಜನವರಿ 15 : ಪ್ರಪಂಚದಲ್ಲಿ   ಕಾಲ ಬದಲಾದಂತೆ ಕೆಲವು ಕಾನೂನುಗಳೂ ಕೂಡ ಬದಲಾಗಬೇಕಾದ ಅವಶ್ಯಕತೆಗಳಿರುತ್ತದೆ. ಹಾಗೊಂದು ವೇಳೆ ಬದಲಾವಣೆ ಆಗದಿದ್ದರೆ ಅದು ಹೊರೆ ಎನಿಸಲು ಆರಂಭಿಸುತ್ತದೆ. ಅದೇ ರೀತಿ ಈ ಒಂದು ಮುಸ್ಲಿಂ ರಾಜ್ಯದಲ್ಲಿನ ಕಾನೂನು ಕೂಡ ಇದೀಗ ರಾಷ್ಟ್ರದ ಹೆಣ್ಣು ಮಕ್ಕಳಿಗೆ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ.

    ಮೊರಾಕೊ ರಾಷ್ಟ್ರದಲ್ಲಿ ಒಂದು ವಿಚಿತ್ರ ಕಾನೂನಿದೆ. ಅಲ್ಲಿ ಮದುವೆಯಾಗುವ ಹೆಣ್ಣು ಮಕ್ಕಳು ಕನ್ಯತ್ವ ಪರೀಕ್ಷೆಗೆ (ವರ್ಜಿನಿಟಿ ಟೆಸ್ಟ್​) ಒಳಗಾಗುವುದು ಅವಶ್ಯಕ. ಅದರ ವರದಿಯ ಆಧಾರದ ಮೇಲೆ ಮದುವೆಯಾಗುವುದು ಅಥವಾ ಬಿಡುವುದು ವರನಿಗೆ ಬಿಟ್ಟಿರುತ್ತದೆ. ಕನ್ಯತ್ವ ಕಳೆದಿದೆ ಎನ್ನುವ ಕಾರಣಕ್ಕೆ ಮದುವೆಯನ್ನು ನಿರಾಕರಿಸಲೂ ಅವಕಾಶವಿದೆ. ಹಾಗಂತ ಅದೇನು ಕಡ್ಡಾಯವಲ್ಲ. ಆದರೆ ಕನ್ಯತ್ವ ಪರೀಕ್ಷೆ ಮಾತ್ರ ಕಡ್ಡಾಯ. ಮೊರಾಕೊದಲ್ಲಿ ಮದುವೆಗೂ ಮೊದಲು ಲೈಂಗಿಕ ಕ್ರಿಯೆ ದೊಡ್ಡ ಅಪರಾಧವೆನಿಸಿಕೊಳ್ಳುತ್ತದೆಯಂತೆ.

    ಮೊರಾಕೊ ಮಾತ್ರವಲ್ಲ, ನಮ್ಮ ನೆರೆಯ ಪಾಕಿಸ್ತಾನದಲ್ಲೂ ಈ ಹಿಂದೆ ಇಂತಹ ವಿಚಿತ್ರ ಕಾನೂನನ್ನು ಪಾಲಿಸಲಾಗುತ್ತಿತ್ತು. ಮದುವೆಯಾಗಿರದ ಹೆಣ್ಣಿನ ಮೇಲೆ ಅತ್ಯಾಚಾರವಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಕನ್ಯತ್ವ ಪರೀಕ್ಷೆ ಮಾಡಲಾಗುತ್ತಿತ್ತು. ಆಕೆಯ ಗುಪ್ತಾಂಗದ ಒಳಗೆ ಎರಡು ಬೆರಳು ಹಾಕಿ ಪರೀಕ್ಷೆ ಮಾಡುವಂತೆ ಕಾನೂನೇ ಹೇಳುತ್ತಿತ್ತು. ಅಲ್ಲಿನ ಹೆಣ್ಣು ಮಕ್ಕಳ, ಸಮಾಜವಾದಿಗಳ ಒಕ್ಕೊರಲ ಕೂಗಿನ ಪ್ರಭಾವ ಇದೀಗ ರಾಷ್ಟ್ರ ಆ ಕಾನೂನನ್ನು ತೆಗೆದುಹಾಕಿದೆ.

    ಮೊರಾಕೊ ಮಾತ್ರ ಇನ್ನೂ ತಮ್ಮ ಕಾನೂನನ್ನು ಮುಂದುವರಿಸಿಕೊಂಡೇ ಹೋಗುತ್ತಿದೆ. ಇಲ್ಲಿನ ಸಮಾಜವಾದಿಗಳು, ಮಹಿಳಾವಾದಿಗಳು ಸೇರಿ ಅನೇಕ ಹೋರಾಟಗಾರರು ಈ ವಿಚಾರವಾಗಿ ಪ್ರತಿಭಟನೆ ನಡೆಸಿದ್ದಾರೆ. ಬದಲಾವಣೆಗೆ ಒತ್ತಾಯಿಸಿದ್ದಾರೆ. ಆದರೆ ಸರ್ಕಾರ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕೇವಲ ಮೊರಾಕೊ ಮಾತ್ರವಲ್ಲ ಈ ರೀತಿ ಅನೇಕ ದೇಶಗಳಲ್ಲಿ ಹೆಣ್ಣಿನ ಕನ್ಯತ್ವ ಪರೀಕ್ಷೆ ಮಾಡುವ ಕಾನೂನುಗಳಿವೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *